ಸಾಲ್ಮರ: ಕೃತಕ ನೆರೆಯಿಂದ ಮತ್ತೆ ಅಂಗಡಿಗೆ ಮಳೆ ನೀರಿನ ದಿಗ್ಭಂಧನ ! – ನಗರಸಭೆ ಮೌನ !

0

ಪುತ್ತೂರು: ಇತ್ತೀಚೆಗಷ್ಟೆ ಎಡೆಬಿಡದ ಮಳೆಯಿಂದಾಗಿ ಕೃತಕ ನೆರೆಯಾಗಿ ಸಾಲ್ಮರ ಕೊಟೇಚಾ ಹಾಲ್ ಸಮೀಪದ ಅಂಗಡಿಯೊಂದಕ್ಕೆ ಮಳೆ ನೀರಿನ ದಿಗ್ಭಂಧನವಾದ ಕೆಲವೆ ದಿನದಲ್ಲಿ ಇದೀಗ ಮತ್ತೆ ಅಂಗಡಿಗೆ ಮಳೆ ನೀರಿನ ದಿಗ್ಭಂದನ ಉಂಟಾಗಿದೆ.
ಸಾಲ್ಮರ ಸೋಮನಾಥ ಎಂಬವರ ಅಂಗಡಿಯ ಬಳಿ ಮೋರಿಯೊಂದು ಬ್ಲಾಕ್ ಆಗಿ ಅವರ ಅಂಗಡಿಗೆ ಮಳೆ ನುಗ್ಗಿ ಅಂಗಡಿಯ ಸುತ್ತು ಆವರಿಸಿದೆ. ಗ್ರಾಹಕರು ಅಂಗಡಿಗೆ ಬರುವುದು ಬಿಡಿ ಸ್ವಂತ ಅಂಗಡಿಯ ಮಾಲಕರೇ ಅಂಗಡಿಯಿಂದ ಹೊರಗೆ ಹೋಗದ ಸ್ಥಿತಿಯಾಗಿ ಅಂಗಡಿ ದ್ವೀಪವಾಗಿದೆ. ಕಳೆದ ಎರಡು ಮೂರು ಮಳೆಗೂ ಇದೇ ಪರಿಸ್ಥಿತಿ ಉಂಟಾದಾಗ ನಗರಸಭೆಯಿಂದ ಪರಿಶೀಲಿಸಿ ಮೋರಿ ಬ್ಲಾಕ್ ತೆರವು ಕಾರ್ಯಾಚರಣೆ ಮಾಡಲು ಹಿಟಾಚಿ ಬಂದಿತ್ತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇದೀಗ ನಿನ್ನೆಯಿಂದ ಸುರಿದ ಎಡೆಬಿಡದ ಮಳೆಗೆ ಅಂಗಡಿ ಮತ್ತೆ ಮಳೆ ನೀರಿನಿಂದ ಸುತ್ತುವರಿದಿದೆ.

LEAVE A REPLY

Please enter your comment!
Please enter your name here