ವಿಟ್ಲ: ಕೊಳ್ನಾಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಬಸ್ಸ್ ಸಂಚಾರವನ್ನು ಸಮಯಕ್ಕೆ ಸರಿಯಾಗಿ ವ್ಯವಸ್ಥಿತ ಸಂಪರ್ಕ ಕಲ್ಪಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಕೊಳ್ನಾಡು ಗ್ರಾಮ ಪಂಚಾಯತ್ ವತಿಯಿಂದ ದಕ್ಷಿಣ ಕನ್ನಡ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರೂ, ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ರವರು ಬೇಟಿ ಮಾಡಿ ಮನವಿ ಸಲ್ಲಿಸಿದರು.
ಕರೋಪಾಡಿ- ಕನ್ಯಾನ-ಕುಡ್ತಮುಗೇರು-ಸೆರ್ಕಳ-ಕಲ್ಲಡ್ಕ- ಬಿ.ಸಿ.ರೋಡ್ ಸಂಪರ್ಕ, ಕರೋಪಾಡಿ- ಕನ್ಯಾನ-ಕುಳಾಲು-ಸಾಲೆತ್ತೂರು-ಮಂಚಿ-ಬಿ.ಸಿ.ರೋಡ್ ಸಂಪರ್ಕ, ವಿಟ್ಲ-ಕೋಡಪದವು-ಶರವು-ತಾಳಿತ್ತನೂಜಿ ಬರುತ್ತಿರುವ ಬಸ್ ಸಂಜೆಯೂ ಸಂಚಾರ ಕಲ್ಪಿಸುವುದು. ವಿಟ್ಲ-ಸಾಲೆತ್ತೂರು-ಮುಡಿಪು-ಮಂಗಳೂರು ಸಂಪರ್ಕ, ವಿಟ್ಲ-ಸಾಲೆತ್ತೂರು-ಮಂಚಿ-ಇರಾ-ಮುಡಿಪು-ಮಂಗಳೂರು ಸಂಪರ್ಕ ಕೋರಿ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಶಿಪಾರಸ್ಸು ಮಾಡಿ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.