ಕೋಡಿಂಬಾಡಿಯಲ್ಲಿ ಮನೆಗೆ ನುಗ್ಗಿದ ಮಳೆ ನೀರು

0

ಪುತ್ತೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರು ಮನೆಯೊಳಗೆ ನುಗ್ಗಿದ ಘಟನೆ ಕೋಡಿಂಬಾಡಿಯಲ್ಲಿ ನಡೆದಿದೆ.
ಕೋಡಿಂಬಾಡಿಯ ಪರಬಪಾಲು ನಿವಾಸಿ ಲೀಲಾವತಿ ಎಂಬವರ ಮನೆಯೊಳಗೆ ನೀರು ನುಗ್ಗಿ ಬಂದಿದ್ದು ಮನೆಯವರು ತೊಂದರೆಗೆ ಸಿಲುಕಿದ್ದಾರೆ. ಪಕ್ಕದಲ್ಲಿ ಮನೆಯ ಆವರಣಗೋಡೆ ಕುಸಿದ ಕಾರಣ ಮಳೆ ನೀರು ಇವರ ಮನೆಯೊಳಗೆ ಬರುವಂತಾಗಿದೆ. ಘಟನಾ ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ಶಾಂತಿನಗರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here