ನೆರೆ ನಿರ್ವಹಣೆ ದೃಷ್ಟಿಯಿಂದ ತಾಲೂಕು ಆಡಳಿತ ಸನ್ನದ್ಧ: ಬಂಟ್ವಾಳ ತಹಶಿಲ್ದಾರ್ ಎಸ್.ಬಿ.ಕೂಡಲಗಿ

0

ವಿಟ್ಲ: ನೇತ್ರಾವತಿ ನೀರಿನ ಹರಿವು ಹೆಚ್ಚಳವಾಗಿದೆ, ಆದರೆ ಯಾವುದೇ ಅಪಾಯವಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಅಧಿಕಾರಿಗಳನ್ನು ತಾಲೂಕು ಆಡಳಿತ ಕೇಂದ್ರದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಪಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಶಾಸಕರ ಸೂಚನೆಯಂತೆ ನೆರೆ ನಿರ್ವಹಣೆ ದೃಷ್ಟಿಯಿಂದ ಒಟ್ಟು ಏಳು ತಂಡಗಳನ್ನು ರಚಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 9 ಕಡೆಗಳಲ್ಲಿ ಕಾಳಜಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ನೆರೆ ಅಥವಾ ಇನ್ನಿತರ ಪಾಕೃತಿಕ ವಿಕೋಪ ದಡಿಯಲ್ಲಿ ಸಮಸ್ಯೆ ಉಂಟಾದರೆ ಈ ಕಾಳಜಿ ಕೇಂದ್ರಕ್ಕೆ ಹೋಗುವಂತೆ ಅವರು ತಿಳಿಸಿದ್ದಾರೆ.


ಬಂಟ್ವಾಳ ದ ಪ್ರವಾಸಿ ಮಂದಿರ ಮತ್ತು ಪಾಣೆಮಂಗಳೂರು ಶಾರದ ಹೈಸ್ಕೂಲ್ ನಲ್ಲಿ ಈ ಪೇಟೆಯ ಭಾಗದ ಜನರಿಗೆ ವ್ಯವಸ್ಥೆ ಮಾಡಿದೆ ಉಳಿದಂತೆ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಜನರ ಹೆದರುವ ಅವಶ್ಯಕತೆ ಇಲ್ಲ, ನೆರೆಯ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಕಲವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಸರ್ವಸನ್ನದ್ದವಾಗಿದೆ.ನೆರೆಯ ಸಂದರ್ಭದಲ್ಲಿ ನದಿ ಬದಿಯ ಜನರನ್ನು ಸಾಗಿಸಲು ದೋಣಿ ಸಹಿತ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಹೊಂದಿದೆ ಎಂದು ತಹಶಿಲ್ದಾರ್ ಕೂಡಲಗಿ ತಿಳಿಸಿದ್ದಾರೆ.


ಆದರೆ ಅನಾವಶ್ಯಕ ವಾಗಿ ಜನರು ನೀರಿಗೆ ಇಳಿಯುವುದು, ನೀರಿನಲ್ಲಿ ಆಡುವುದಕ್ಕೆ ಹೋಗಬಾರದು, ನದಿ ತೀರದ ಜನರು ಹೆಚ್ಚು ಜಾಗರೂಕತೆಯಿಂದ ಇರಬೇಕು.ಮಕ್ಕಳು ನದಿ ತೀರಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here