





ಪುತ್ತೂರು: ಉಪ್ಪಿನಂಗಡಿ ಗ್ರಾ.ಪಂ ವ್ಯಾಪ್ತಿಯ ಕಜೆಕಾರ್ ಎಸ್ ಸಿ ಕಾಲನಿಯಲ್ಲಿ ಶನಿವಾರ ರಾತ್ರಿ ಮರವೊಂದು ಮನೆಯ ಮೆಲೆ ಬಿದ್ದು ಎರಡೂ ಮನೆಗಳು ಸಂಪೂರ್ಣ ಜಖಂಗೊಂಡ ಘಟನೆ ನಡೆದಿದೆ.



ಕಾಲನಿ ನಿವಾಸಿಗಳಾದ ಸುಂದರಿ ಹಾಗೂ ಸೇಸಮ್ಮ ಎಂಬವರ ಮನೆ ಹಾನಿಯಾಗಿದೆ. ಮನೆಯೊಳಗೆ ಮನೆ ಮಂದಿ ಇದ್ದರೂ ಯಾವುದೇ ಗಾಯಗಳಾಗಿಲ್ಲ. ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಮನೆಯ ಮಾಡಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಸರಕಾರದಿಂದ ಪರಿಹಾರ ಒದಗಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.











ಈ ಸಂದರ್ಭದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ, ಉಪ್ಪಿನಂಗಡಿ ಗ್ರಾ.ಪಂ ಪಿಡಿಒ ವಿಲ್ಫ್ರಡ್, ಗ್ರಾ.ಪಂ ಸದಸ್ಯ ಯು ಟಿ ತೌಸೀಫ್ ಹಾಗೂ ಉಪ್ಪಿನಂಗಡಿ ಗ್ರಾಮಕರಣಿಕರು ಉಪಸ್ಥಿತರಿದ್ದರು.






