ಅತ್ತೆಗೆ ಹಲ್ಲೆ ನಡೆಸಿದ ಸೊಸೆ – ಪ್ರಕರಣ ದಾಖಲು

0

ಪುತ್ತೂರು: ಮನೆಗೆ ಬಂದವರನ್ನು ವಿಚಾರಿಸಿದ ವಿಚಾರಕ್ಕೆ ಸಂಬಂಧಿಸಿ ಅತ್ತೆ ಸೊಸೆಯಲ್ಲಿ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಿರುವ ಘಟನೆ ಜು.21ರಂದು ಕೆಮ್ಮಿಂಜೆ ಗ್ರಾಮದ ಮಣ್ಣಾಪು ಎಂಬಲ್ಲಿ ನಡೆದಿದ್ದು, ಸೊಸೆಯಿಂದ ಅತ್ತೆಗೆ ಹಲ್ಲೆ ನಡೆದಿರುವ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೆಮ್ಮಿಂಜೆ ಗ್ರಾಮದ ಮಣ್ಣಾಪು ದಿ.ಬಾಬು ಎಂಬವರ ಪತ್ನಿ ಲೀಲಾ(52ವ)ರವರು ಹಲ್ಲೆಗೊಳಗಾದ ಅತ್ತೆ. ಅವರ ಸೊಸೆ ಅನಿತಾ ಅವರೊಂದಿಗೆ ಆಕೆಯ ಸ್ನೇಹಿತೆಯೊಬ್ಬರು ಮನೆಗೆ ಬಂದಿದ್ದು, ಸ್ವಲ್ಪ ಹೊತ್ತಿನ ಬಳಿಕ ವ್ಯಕ್ತಿಯೊಬ್ಬರು ಮನೆಗೆ ಬಂದಿದ್ದರು. ಅವರನ್ನು ನಾನು ವಿಚಾರಿಸಿದಾಗ ಸೊಸೆ ಅನಿತಾ ಮಧ್ಯೆ ಪ್ರವೇಶಿಸಿ ನನ್ನ ಜೊತೆ ಅಂಗಡಿಯಲ್ಲಿ ಕೆಲಸ ಮಾಡುವವರು ಮನೆಗೆ ಬಂದರೆ ಕೇಳಲು ನೀವು ಯಾರು ಎಂದು ಜಗಳ ತೆಗೆದು ಮನೆಯಂಗಳದಲ್ಲಿ ನಿಲ್ಲಿಸಿದ ಸ್ಕೂಟರ್‌ನಲ್ಲಿದ್ದ ಹೆಲ್ಮೆಟ್ ನಿಂದ ನನ್ನ ತಲೆಗೆ ಹಲ್ಲೆ ನಡೆಸಿದ್ದಾರೆ ಎಂದು ಅತ್ತೆ ಲೀಲಾ ಆರೋಪಿಸಿದ್ದಾರೆ. ಲೀಲಾ ಅವರು ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here