ವಿಟ್ಲ: ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ಬಿ.ಸಿ. ರೋಡಿನ ರೋಟರಿ ಭವನದಲ್ಲಿ ಇಂದು ಕರ್ನಾಟಕ ಪ್ರೌಢಶಾಲೆ ಮಾಣಿಯ ಇಂಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ನಡೆಯಿತು. ಜಿಲ್ಲಾ ಇಂಟರಾಕ್ಟ್ ಕ್ಲಬ್ ಚೇರ್ಮನ್ ಮಂಜುನಾಥ ಬಾಳಿಗಾ ದೀಪ ಬೆಳಗಿಸಿ ಉದ್ಘಾಟಿಸಿ, ಪ್ರಮಾಣ ವಚನ ಬೋಧಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜೆಸಿಐ ತರಬೇತುದಾರರಾದ ಧೀರಜ್ ಉದ್ಯಾವರ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣದ ಬಗ್ಗೆ ತರಬೇತಿ – ಮಾರ್ಗದರ್ಶನ ನೀಡಿದರು. ಮಾಣಿ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ಕಿರಣ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಣಿ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆ ಸಾನಿಕ ಡಿ.ಎಸ್., ಉಪಾಧ್ಯಕ್ಷೆ ಜಮೀಹ, ಪ್ರಧಾನ ಕಾರ್ಯದರ್ಶಿ ಮರಿಯಮ್ ಸ್ವಾಬಿರ ಜೊತೆ ಕಾರ್ಯದರ್ಶಿ ಫಾತಿಮತ್ ನುಝಾ
ಕೋಶಾಧಿಕಾರಿ ಫಾತಿಮತ್ ಅಮಾನ,ವಲಯ ಸೇನಾನಿ ವಿಶಾಲ್, ವೊಕೇಶನಲ್ ಸರ್ವಿಸ್ ಶ್ರೀಜಿತ್,ಕಮ್ಯುನಿಟಿ ಸರ್ವಿಸ್ ಅಬುಸಾಕಿರ್, ಯೂತ್ ಸರ್ವಿಸ್ ಮೌಶಿಕ್, ಇಂಟರ್ನ್ಯಾಷನಲ್ ಸರ್ವಿಸ್ ಮಹಮದ್ ಇರ್ಫಾಝ್, ಕ್ಲಬ್ ಸರ್ವಿಸ್ ನಿರ್ದೇಶಕಿ ಶ್ರೀದೇವಿ ಮತ್ತು ಫಾತಿಮತ್ ಮುನೀಝ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರತಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಗಿಡಗಳನ್ನು ನೀಡಲಾಯಿತು. ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷರಾದ ಪ್ರಕಾಶ್ ಬಾಳಿಗ ಸ್ವಾಗತಿಸಿ, ಕಾರ್ಯದರ್ಶಿ ಸದಾಶಿವ ಬಾಳಿಗಾ ವಂದಿಸಿ, ಅಹ್ಮದ್ ರವರು ಕಾರ್ಯಕ್ರಮ ನಿರೂಪಿಸಿದರು.