ರಾಮಕುಂಜ: ಕಾಂಪೌಂಡ್ ಕುಸಿತ

0

ರಾಮಕುಂಜ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಾಮಕುಂಜ ಗ್ರಾಮದ ಶಾರದಾನಗರ ನಿವಾಸಿ ಗುಲಾಬಿ ಎಂಬವರ ಮನೆಯ ಎದುರಿನ ಆವರಣಗೋಡೆ ಕುಸಿದು ಬಿದ್ದಿದೆ. ಇದರಿಂದಾಗಿ ಅವರಿಗೆ ಸುಮಾರು 4 ಸಾವಿರ ರೂ.,ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ರಾಮಕುಂಜ ಗ್ರಾ.ಪಂ.ಸದಸ್ಯರಾದ ಸೂರಪ್ಪ ಕುಲಾಲ್, ಕೇಶವ ಗಾಂಧಿಪೇಟೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತಂತೆ ಗುಲಾಬಿಯವರು ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here