ನರಿಮೊಗರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಶ್ರೀ ದೇವಿ (ಪಾರ್ವತಿ) ತನ್ನ ಗುಡಿಯಲ್ಲಿ ಈಗ ಶ್ರೀ ದುರ್ಗಾಪರಮೇಶ್ವರೀ ಎಂಬ ಮೂಲ ನಾಮದೊಂದಿಗೆ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ಶ್ರೀ ದೇವಳವು 2008ರಲ್ಲಿ ಜೀರ್ಣೋದ್ಧಾರಗೊಂಡ ಅವಧಿಯಿಂದ ಶ್ರೀ ದುರ್ಗಾಪರಮೇಶ್ವರಿ ದೇವರ ಗುಡಿಯ ಮುಂಭಾಗದಲ್ಲಿ ಶ್ರೀ ದೇವಿ ಸನ್ನಿಧಿ ಎಂದು ಗೋಡೆಯಲ್ಲಿ ನಮೂದಿಸಲಾಗಿತ್ತು. ಇದೀಗ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಶ್ರೀ ದುರ್ಗಾಪರಮೇಶ್ವರೀ ಎಂದು ಮೂಲ ನಾಮವನ್ನು ಮುದ್ರಿಸಿದೆ.
ಶ್ರೀ ದೇವಳದದಲ್ಲಿ ಶ್ರೀ ಮೃತ್ಯುಂಜಯೇಶ್ವರ (ಶಿವ) ದೇವರು ಪ್ರಧಾನ ದೇವರು. ಶಿವ ಪತ್ನಿ ಪಾರ್ವತಿ / ಶ್ರೀ ದುರ್ಗಾಪರಮೇಶ್ವರೀ ಪರಿವಾರ ದೇವರು. ಇಲ್ಲಿ ಶ್ರೀ ದುರ್ಗಾಪರಮೆಶ್ವರೀ ದೇವರ ಗುಡಿಯ ಮುಂಭಾಗದಲ್ಲಿ ಶ್ರೀ ದೇವಿ ಸಾನಿಧ್ಯ ಎಂದು ನಮೂದಿಸಿದ್ದು, ಮೂಲ ಸಂಪ್ರದಾಯ ಶಾಸ್ತ್ರಕ್ಕೆ ವಿರುದ್ಧವಾದುದು. ಇಲ್ಲಿ ಶ್ರೀ ದುರ್ಗಾಪರಮೇಶ್ವರೀ ಗುಡಿ ಎಂದು ಮುದ್ರಿಸುವಂತೆ ಶೈವಕ್ಷೇತ್ರ ಸಂರಕ್ಷಣಾ ವೇದಿಕೆಯ ಸಂಸ್ಥಾಪಕ ಶ್ರೀನಾಥ್ ಟಿ.ಎಸ್ ಕಲ್ಕುಂದರವರು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಗೆ ಹಿಂದು ಧಾರ್ಮಿಕದತ್ತಿ ಇಲಾಖೆಯ ಜಿಲ್ಲಾಧಿಕಾರಿಯವರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಇದೀಗ ಮನವಿ ಪರಿಶೀಲಿಸಿ ಮೂಲ ನಾಮವನ್ನು ಮುದ್ರಿಸಲಾಗಿದೆ.