





ಪುತ್ತೂರು: ನಗರದ ಪಾಂಗ್ಲಾಯಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊದೆಯೊಂದರ ಬಳಿ ಈ ಅಪರಿಚಿತ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.



ಮಾಹಿತ ಆಧಾರದಲ್ಲಿ ಸ್ಥಳಕ್ಕೆ ಬಂದ ಇನ್ಸ್‌ಪೆಕ್ಟರ್ ಸುನೀಲ್ ನೇತೃತ್ವದ ಪೊಲೀಸರ ತಂಡ ಪರಶೀಲನೆ ನಡೆಸಿ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತದೇಹವನ್ನು ಸಾಗಿಸುವಲ್ಲಿ ನಗರದ ಆದರ್ಶ ಆಸ್ಪತ್ರೆ ಅಂಬ್ಯುಲೆನ್ಸ್ ಚಾಲಕ ದಯಾನಂದ್ ಮತ್ತು ಸ್ಥಳೀಯರು ಸಹಕರಿಸಿದ್ದಾರೆ. ಮೃತದೇಹ ಸ್ಥಳೀಯ ವ್ಯಕ್ತಿಯೊಬ್ಬರದ್ದೆನ್ನುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಉಳಿದಂತೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.








            






