ಪುತ್ತೂರು:ವಿವೇಕ ಜಾಗೃತ ಬಳಗಗಳು ಮಧ್ಯ ವಲಯ-3 ಡಿವೈನ್ ಪಾರ್ಕ್ ಟ್ರಸ್ಟ್ ಸಾಲಿಗ್ರಾಮ ಇದರ ವತಿಯಿಂದ ಯೋಗ ಪರ್ಯಟನ ಕಾರ್ಯಕ್ರಮಗಳು ಜು.29ರಂದು ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಲಿದೆ.
ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ಡಿವೈನ್ ಪಾರ್ಕ್ 1986ರಲ್ಲಿ ಸ್ಥಾಪನೆಗೊಂಡು ದೇಶವಿದೇಶಗಳಿಂದ ಲಕ್ಷಾಂತರ ಭಕ್ತ ರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಸ್ವಾಮಿ ವಿವೇಕಾನಂದರ ಜಾಗೃತ ಚೇತನ. ಮಾತನಾಡುವ ಶಕ್ತಿಯಾಗಿ ಇಲ್ಲಿ ಲೀಲೆ ತೋರುತ್ತಿರುವುದು. ಸಂಸಾರಿಗಳ ಸಾಧನಾ ಗರಡಿ ಎನಿಸಿರುವ ಈ ಕ್ಷೇತ್ರದಲ್ಲಿ ಭಕ್ತರ ಕಷ್ಟ ನಷ್ಟಗಳಿಗೆ ಅಧ್ಯಾತ್ಮಿಕ ಪರಿಹಾರ ದೊರಕುತ್ತದೆ.
ಆತ್ಮಶಕ್ತಿ ಜಾಗೃತಿ, ವ್ಯಕ್ತಿ ನಿರ್ಮಾಣ ರಾಷ್ಟ್ರ ನಿರ್ಮಾಣ ಈ ಸಂಸ್ಥೆಯ ಧ್ಯೇಯವಾಗಿದ್ದು ಇಲ್ಲಿ ಪ್ರಕಟಗೊಳ್ಳುವ ಆಧ್ಯಾತ್ಮಿಕ ಚಾತುರ್ಮಾಸ ಪತ್ರಿಕೆ 2ಲಕ್ಷ ಚಂದಾ ದಾರರನ್ನು ಹೊಂದಿದೆ. ವಿವೇಕ ವಾಣಿ ಎಂಬ ಆಂಗ್ಲ ಅರ್ಧವಾರ್ಶಿಕ ಪತ್ರಿಕೆ 25000 ಚಂದಾದಾರರನ್ನು ಹೊಂದಿದೆ. ದಿನವಹಿ ಕೇಳುಗರ ದೂರವಾಣಿಗೆ ಬರುವ ಒಂದು ನಿಮಿಷದ ಗುರು ವಾಣಿಗೆ 15000ಚಂದಾದಾರರನ್ನು ಹೊಂದಿದೆ. ಡಿವೈನ್ ಪಾರ್ಕ್ youtube ಚಾನೆಲ್ ಗೆ ಲಕ್ಷಾಂತರ ವೀಕ್ಷಕರಿದ್ದಾರೆ. ಪ್ರತಿ ಗುರುವಾರ ಶ್ರೀ ಶಂಕರ ಚಾನೆಲ್‌ನಲ್ಲಿ ರಾತ್ರಿ 9.30ಕ್ಕೆ ಡಾಕ್ಟರ್ ಜೀಯವರ ಅಧ್ಯಾತ್ಮಿಕ ಮಾರ್ಗದರ್ಶನ ಪ್ರಸಾರವಾಗುತ್ತಿದೆ.
ಅಂದಿನ ವೀರದಾಂತಿ ಸ್ವಾಮಿ ವಿವೇಕಾನಂದರು ಜಾಗೃತ ಚೇತನರಾಗಿ ಶ್ರೀ ಗುರೂಜಿ ಆಗಿಯೇ ನಿರ್ದೇಶಿಸಿ, ಕಟ್ಟಿಕೊಂಡ ಅವರ ವಿಶೇಷ ಆಧ್ಯಾತ್ಮಿಕ ಪ್ರಯೋಗ ಶಾಲೆಯೇ ಸಾಲಿಗ್ರಾಮ ಡಿವೈನ್ ಪಾರ್ಕ್ ಆಗಿದೆ. ಕಳೆದ 38 ವರ್ಷಗಳಿಂದ ಈ ಕ್ಷೇತ್ರವು ಅವರ ದಿವ್ಯ ಲೀಲಾ ಕ್ಷೇತ್ರವಾಗಿ ಜಗದಗಲ ಹಬ್ಬಿ ನೂರಾರು ವಿವೇಕ ಜಾಗೃತ ಬಳಗಗಳ ಮೂಲಕ ವ್ಯಕ್ತ್ತಿತ್ವ ನಿರ್ಮಾಣ ಹಾಗೂ ಲೋಕೋದ್ಧಾರದ ಪವಿತ್ರ ಗುರಿಗಳತ್ತ ಸದ್ದಿಲ್ಲದೆ, ಅದ್ಬುತ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ. ಪುತ್ತೂರು, ಸುಳ್ಯ, ಎಣ್ಮೂರು, ಹರಿಹರ ಪಲ್ಲತ್ತಡ್ಕ, ಸುಬ್ರಹ್ಮಣ್ಯ, ಕಡಬ, ಬಿಳಿನೆಲೆ ಚಾರ್ವಾಕ, ಸವಣೂರುಗಳಲ್ಲಿ ಅಂಗ ಸಂಸ್ಥೆಗಳನ್ನು ಹೊಂದಿದೆ.
ಈ ಕ್ಷೇತ್ರದ ಆಧ್ಯಾತ್ಮಿಕ ಕ್ಷೇತ್ರದ ಸಂಘಟನಾತ್ಮಕ ವಿನೂತನ `ಯೋಗ ಪರ್ಯಟನ’ ಎಂಬ ಅನನ್ಯ ಕಾರ್ಯಕ್ರಮವು ಪುತ್ತೂರಿನ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಜರುಗಲಿದೆ. ಈ ಕಾರ್ಯಕ್ರಮ ಕೋಟ ಮೂಡುಗಿಳಿಯಾರು ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಡಾ. ವಿವೇಕ ಉಡುಪ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಿವೇಕ ಜಾಗ್ರತ ಬಳಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.