ಹನುಮಗಿರಿ ಶ್ರೀ ಗಜಾನನ ಆ.ಮಾ ಶಾಲೆಯಲ್ಲಿ ಸಾಮೂಹಿಕ ಹುಟ್ಟುಹಬ್ಬ ಆಚರಣೆ

0

ಈಶ್ವರಮಂಗಲ :ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲೈ ತಿಂಗಳಲ್ಲಿ ಜನಿಸಿದ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬವನ್ನು ಜುಲೈ 28ರಂದು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪೋಷಕಿ ಅಕ್ಷತಾ ದೀಪ ಪ್ರಜ್ವಲನೆಯ ಮೂಲಕ ಕಾರ್‍ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪ್ರಾಂಶುಪಾಲ ಕೆ ಶಾಮಣ್ಣ ವಿದ್ಯಾರ್ಥಿಗಳಿಗೆ ‘ನಿಮ್ಮ ಕನಸುಗಳೆಲ್ಲ ನನಸಾಗಲಿ’ ಎಂದು ಶುಭ ಹಾರೈಸಿದರು. ಹುಟ್ಟುಹಬ್ಬವನ್ನು ಆಚರಿಸಿದ ಮಕ್ಕಳಿಗೆ ಕಿರುಕಾಣಿಕೆಯನ್ನು ನೀಡಲಾಯಿತು. ವಿದ್ಯಾರ್ಥಿನಿಯರು ಹುಟ್ಟುಹಬ್ಬದ ಶುಭಾಶಯ ಗೀತೆಯನ್ನು ಹಾಡಿದರು. ಶಿಕ್ಷಕಿ ರಾಜಶ್ರೀ,. ಭವ್ಯ ಪಿ ಮತ್ತು ಪ್ರಮೀಳಾ ಆರತಿ ಬೆಳಗಿದರು. ರಿಯಾ ಬಿಯೋನ್ ಕಾರ್‍ಯಕ್ರಮವನ್ನು ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here