ಪುತ್ತೂರು: ಪರಂಪರೆಯಲ್ಲಿ ಆರಾಧಿಸಲ್ಪಟ್ಟ ಮತ್ತು ಈಗ ಅಗೋಚರವಾಗಿರುವಂತಹ ಶ್ರೀ ಮಹಾಸಾನಿಧ್ಯದ ಕುರಿತು ಬನ್ನೂರು ಗ್ರಾಮದ ಬಾವುದ ಕೆರೆಯ ಬಳಿ ಜು. 30ರಂದು ಅಷ್ಟಮಂಗಳ ಪ್ರಶ್ನಾಚಿಂತನೆ ನಡೆಯಲಿದೆ.
ಜು.30ರಂದು ಬೆಳಗ್ಗೆ ಗಂಟೆ 9.30ರಿಂದ ದೈವಜ್ಞರಿಂದ ಪ್ರಶ್ನಾಚಿಂತನೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಪ್ರಶ್ನಾಚಿಂತನೆ ಅಂಗವಾಗಿ ಜು.28ರಂದು ಬಾವುದ ಕೆರೆಯ ಬಳಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ ಮತ್ತು ರಾತ್ರಿ ಶ್ರೀ ದುರ್ಗಾಪೂಜೆ ನಡೆಯಿತು. ದುರ್ಗಾಪೂಜೆ ಸಂದರ್ಭದಲ್ಲಿ ಒಡಿಯೂರು ಶ್ರೀ ವಜ್ರಮಾತಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಪೂಜೆಯ ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ಊರಿನ ಹಲವಾರು ಮಂದಿ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜು.30ರಂದು ರಂದು ನಡೆಯುವ ಅಷ್ಟಮಂಗಳ ಪ್ರಶ್ನಾಚಿಂತನೆ ಕಾರ್ಯಕ್ರಮಕ್ಕೆ ಊರವರು ಭಾಗವಹಿಸುವಂತೆ ಬನ್ನೂರು ಗುತ್ತು ಮನೆತನದ ಸುದೇಶ್ ಪೂಂಜಾ ಮತ್ತು ತುಳಸಿ ಕೆಟರರ್‍ಸ್‌ನ ಹರೀಶ್ ಭಟ್ ವಿನಂತಿಸಿದ್ದಾರೆ.