ಪುತ್ತೂರು: ಕಡಬದ ಸರಸ್ವತಿ ವಿದ್ಯಾಲಯದಲ್ಲಿ ಜು. 28ರಂದು ನಡೆದ ವಿದ್ಯಾಭಾರತಿಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯ ವೈಯುಕ್ತಿಕ ವಿಭಾಗದಲ್ಲಿ ಉಪ್ಪಿನಂಗಡಿ ವೇದಶಂಕರನಗರದ ಶ್ರೀರಾಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಯಕ್ಷಿತಾ ಪ್ರಥಮ ಸ್ಥಾನ ಮತ್ತು ವರಲಕ್ಷ್ಮಿ ನಾಲ್ಕನೇ ಸ್ಥಾನ ಪಡೆದು ಪ್ರಾಂತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಯೋಗಾಸನ ಸ್ಪರ್ಧೆಯ ಗುಂಪು ವಿಭಾಗದಲ್ಲಿ ಕಿಶೋರ ವರ್ಗದ ಬಾಲಕಿಯರ ತಂಡ (ಹತ್ತನೆಯ ತರಗತಿಯ ವಿದ್ಯಾರ್ಥಿನಿಯರಾದ ಯಕ್ಷಿತಾ,ವರಲಕ್ಷ್ಮಿ, ಹರ್ಷಿತಾ ಕೆ, ನಂದಿನಿ ,ಯಶ್ವಿತಾ ಜಿ ) ಪ್ರಥಮ ಸಮಗ್ರ ಪ್ರಶಸ್ತಿ, ಬಾಲ ವರ್ಗದ ಬಾಲಕರ ತಂಡ (ಮನ್ವಿತ್ ಕುಮಾರ್, ಜಶ್ವಿತ್, ಕೆ. ಪ್ರಣವ್ ನರಸಿಂಹ ಶರ್ಮ, ತುಷಾರ್ ದೇವಾಡಿಗ, ರಂಜನ್) ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಈ ಯೋಗಪಟುಗಳಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀರಂಜಿನಿ , ಶಿಕ್ಷಕಿಯರಾದ ಉಷಾ ಮತ್ತು ಪೂಜಾ ತರಬೇತಿ ನೀಡಿದ್ದರು.