ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲಲು ಆಧ್ಯಾತ್ಮಿಕತೆಯೊಂದೇ ದಾರಿ-ವಿವೇಕ ಜಾಗೃತ ಬಳಗದ ಯೋಗ ಪರ್ಯಟನದಲ್ಲಿ ಡಾ| ವಿವೇಕ ಉಡುಪ

0

ಪುತ್ತೂರು: ಆಧುನಿಕ ಜೀವನದಲ್ಲಿ ಜನರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲಲ್ಲು ಆಧ್ಯಾತ್ಮಿಕತೆಯೊಂದೇ ಪ್ರಮುಖ ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಡಿವೈನ್ ಪಾರ್ಕ್ ವ್ಯಕ್ತಿತ್ವ ರೂಪಿಸುತ್ತದೆ. ಮನಸನ್ನು ಅರಳಿಸಿ, ಜೀವನದ ದಾರಿಕಲಿಸುತ್ತದೆ. ವಿವೇಕಾ ಜಾಗೃತ ಬಳಗದ ಮುಖಾಂತರ ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರೋತ್ಥಾನ ಮಾಡುವ ಅರ್ಥ ಗರ್ಭಿತವಾಗಿ ಕೆಲಸ ಮಾಡುತ್ತಿದೆ. ಸಮಾಜದ ಪರಿವರ್ತನೆಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಕೋಟ ಮೂಡುಗಿಳಿಯಾರು ಯೋಗ ಬನ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಡಾ. ವಿವೇಕ ಉಡುಪ ಹೇಳಿದರು.


ವಿವೇಕ ಜಾಗೃತ ಬಳಗಗಳು ಮಧ್ಯ ವಲಯ-3 ಡಿವೈನ್ ಪಾರ್ಕ್ ಟ್ರಸ್ಟ್ ಸಾಲಿಗ್ರಾಮ ಇದರ ವತಿಯಿಂದ ಜು.29ರಂದು ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆದ ಯೋಗ ಪರ್ಯಟನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಉನ್ನತ ವ್ಯಾಸಂಗ ಮಾಡಿ, ಬುದ್ಧಿ ಶಕ್ತಿ ಹೆಚ್ಚಿಸಿಕೊಂಡು, ಉನ್ನತ ಉದ್ಯೋಗ, ವೇತನ ಪಡೆದು ಸಮಾಜದಲ್ಲಿ ಗೌರವ ಪಡೆದರೂ ಭಾವನಾತ್ಮಕ ವಲಯ ಕುಸಿತವಾಗಿದೆ. ಕೋವಿಡ್ ನಂತರ ವಿವಾಹ ವಿಚ್ಚೇದನ ಮಿತಿ ಮೀರಿದ್ದು ದುರಾದೃಷ್ಟ ಘಟನೆ ನಡೆಯುತ್ತದೆ. ಶೋಕಿ ಜೀವನದಲ್ಲಿ ಮುಳುಗಿ ಹೋಗಿದ್ದೇವೆ. ವಿಜ್ಞಾನ, ತಂತ್ರಜ್ಞಾನ ಮುಂದುವರಿದಿದ್ದು ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗಿ ಖಿನ್ನತೆ ಒಳಗಾಗುತ್ತಿದ್ದಾರೆ. ಎಲ್ಲಾ ಖಿನ್ನತೆಗಳಿಂದ ಹೊರ ಬರಲು ಧ್ಯಾನ, ಯೋಗ, ಪ್ರಾಣಾಯಾಮ ಸಹಕಾರಿಯಾಗಿದೆ. ಗುರುಪೂರ್ಣಿಮೆಯ ದಿನ ಅದ್ಬುತವಾದುದು. ಆ ದಿನದ ಪೂಜೆಗೆ ಶಕ್ತಿಯಿದೆ. ಗುರಿವಿನ ಶಕ್ತಿ ನಮ್ಮಲ್ಲಿದ್ದರೆ ಯಾವುದಕ್ಕೂ ಹೆದರಬೇಕಾಗಿಲ್ಲ ಎನ್ನುವುದಕ್ಕೆ ಸ್ವಾಮಿ ವಿವೇಕಾನಂದ ನಿದರ್ಶನ ಎಂದರು


ಧ್ಯಾನ, ದೇವರ ನಾಮ ಸ್ಮರಣೆ, ಕೈ ಮುಗಿಯುವುದು ಫ್ಯಾಷನ್ ಅನ್ನುವುದರಿಂದಲೇ ಇಂದು ಹಲವರು ಚಿಕಿತ್ಸೆಗೆ ಬರುತ್ತಿದ್ದಾರೆ. ಪ್ರಕೃತಿಯ ನಿಯಮಗಳನ್ನು ದಿಕ್ಕರಿಸುತ್ತಿರುವುದರಿಂದಲೇ ಜಾಗತಿಕ ತಾಪಮಾನದ ಏರಿಳಿತ ನಿಂತಿದ್ದು ಈಗ ಕುದಿಯುವ ಯುಗ ಪ್ರಾರಂಭವಾಗಿದೆ. ಇದಕ್ಕಾಗಿ ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ತಂದೆ-ತಾಯಿ ಮಕ್ಕಳಲ್ಲಿ ಬಹಳಷ್ಟು ಕನಸುಗಳನ್ನಿಟ್ಟಿದ್ದು ಅವರ ಕನಸುಗಳನ್ನು ನನಸಾಗಿಸುವ ಬಹುದೊಡ್ಡ ಹೊಣೆ ವಿದ್ಯಾರ್ಥಿಗಳಲ್ಲಿದ್ದು ತಾವುಗಳು ದುಶ್ಚಟಗಳಂತಹ ಹುಚ್ಚು ಜೀವನದಿಂದ ಹೊರಬಂದು ಜಾಗೃತರಾಗಬೇಕು ಎಂದು ಹೇಳಿದ ಅವರು ಡಿವೈನ್‌ಪಾರ್ಕ್ ಜನರಲ್ಲಿ ಪ್ರೀತಿ ತುಂಬಿಸುತ್ತದೆ. ಸಮಾಜದಲ್ಲಿ ದಾರಿತಪ್ಪುವ ವಿದ್ಯಾರ್ಥಿಗಳಿಗೆ ಸಮರ್ಥರನ್ನಾಗಿಸುವ ಹೊಸ ಯೋಜನೆ ಹಾಕಿಕೊಳ್ಳಲಾಗಿದೆ. ವಿಧ್ಯಾರ್ಥಿಗಳ ಭವಿಷ್ಯ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಧರ್ಮದ ನೆರಳಿನಲ್ಲಿ ಬೆಳೆಯಲಿ ಎಂದು ತಿಳಿಸುತ್ತಿದೆ. ಅನಾವಶ್ಯಕ ಔಷಧದಿಂದ ಹೊರಬಂದು ಆರೋಗ್ಯವನ್ನು ಉಳಿಸಿಕೊಳ್ಳಲು ಡಿವೈನ್ ಪಾರ್ಕ್ ಶ್ರಮಿಸುತ್ತಿದೆ ಎಂದು ಡಾ ವಿವೇಕ ಉಡುಪ ಹೇಳಿದರು.


ಡಿವೈನ್ ಪಾರ್ಕ್ ಮದ್ಯ ವಲಯ ಅಧಿಕಾರಿ ಸುಂದರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿಯ ಸಾಲಿಗ್ರಾಮದಲ್ಲಿರುವ ಡಿವೈನ್ ಪಾರ್ಕ್ ಕಳೆದ 38 ವರ್ಷಗಳಿಂದ ಆದ್ಯಾತ್ಮಿಕತೆಯನ್ನು ಮನೆ ಮನೆ ತಲುಪಿಸುತ್ತಿರುವ ಸಂಸ್ಥೆಯಾಗಿದೆ. ವಿವೇಕ ಜಾಗೃತ ಬಳಗವು ದೇಶ ವಿದೇಶಗಳಲ್ಲಿ 150ಕ್ಕೂ ಮಿಕ್ಕಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಶ್ರದ್ದಾಕೇಂದ್ರಗಳಿಗಿಂತ ಭಿನ್ನವಾಗಿರುವ ವಿವೇಕ ಜಾಗೃತ ಬಳಗವು ಸರ್ವಧರ್ಮ ಸಮನ್ವಯ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಜನರ ಜೀವನದ ನೆಮ್ಮದಿಗೆ ಪೂರ್ಣ ಸಹಕಾರಿಯಾಗಿ ಕೆಲಸ ಮಾಡುತ್ತಿದೆ. ಸಂಸ್ಥೆಯ ವಿವೇಕ ಸಂಪದ ಪತ್ರಿಕೆಯ ಮೂಲಕ ಜನರ ಮನಸ್ಸು ಅರಲಿಸುವ ಕಾರ್ಯವಾಗುತ್ತಿದೆ. ಜೀವನದ ಬದಲಾವಣೆಗೆ ಪೂರಕವಾದ ಅಂಶಗಳನ್ನು ಪುಸ್ತಕದಲ್ಲಿ ನೀಡಲಾಗುತ್ತದೆ. ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿದೆ ಎಂದರು.


ಆರೋಗ್ಯ ಸಿಂಚನ ಸುಧಾ ಕುರಿತು ಮಾತನಾಡಿದ ಇಂದಿರಾ ಗಣೇಶ್ ಸುಳ್ಯ, ಡಿವೈನ್ ಪಾರ್ಕ್‌ನ ಯೋಗಬನದಲ್ಲಿರುವ ಚಿಕಿತ್ಸೆಯ ವಿಧಾನ, ಅಲ್ಲಿನ ವಿಶೇಷತೆಗಳ ಬಗ್ಗೆ ತಿಳಿಸಿ ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳವಂತೆ ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಆರು ವಿವೇಕ ಜಾಗೃತ ಬಳಗದ ವತಿಯಿಂದ ಡಾ. ವಿವೇಕ ಉಡುಪರವರನ್ನು ಸನ್ಮಾನಿಸಲಾಯಿತು. ಪುತ್ತೂರು ವಿವೇಕ ಜಾಗೃತ ಬಳಗ ಕೋಶಾಧಿಕಾರಿ ಟಿ.ಆರ್ ಕಲ್ಲೂರಾಯ, ದಾನಿ ಶಾರದಾ ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪುತ್ತೂರು ವಿವೇಕ ಜಾಗೃತ ಬಳಗದ ಅಧ್ಯಕ್ಷ ಜಯಂತ ಹೆಗ್ಡೆ ಸ್ವಾಗತಿಸಿದರು. ಡಿವೈನ್ ಪಾರ್ಕ್ ಮದ್ಯ ವಲಯ ಅಧಿಕಾರಿಗಳು ಮಾಧವ ಮುಡೂರು ವಂದಿಸಿದರು. ಉಮೇಶ್ ಕುಲಾಲ್, ಗಣೇಶ್, ಸುನಂದಾ, ಕವಿತಾ, ಸೀತಾರಾಮ, ರವಿರಾಜ ಸುಳ್ಯ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ಕೆ.ವಿ ಮಾಧವ ಕರಂದ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಡಿವೈನ್ ಪಾರ್ಕ್ ಅಧಿಕಾರಿಗಳಾದ ಪ್ರಕಾಶ್ ಕುಮಾರ ಶೆಟ್ಟಿ ಮತ್ತು ಶ್ರೀ ಮೋನಪ್ಪ ನಾಯ್ಕ್ ಕಾರ್ಯಕ್ರಮ ಮಾರ್ಗದರ್ಶಕರಾಗಿದ್ದರು.

LEAVE A REPLY

Please enter your comment!
Please enter your name here