ಕೆಎಸ್‌ಟಿಎ ಪುತ್ತೂರು ಕ್ಷೇತ್ರ ಸಮಿತಿ ಮಹಾಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಭರವಸೆ

0

`ಬಡ ಟೈಲರ್‌ಗಳ ಬೇಡಿಕೆಯ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವೆ’

ಟೈಲರ್‌ಗಳ ಸಮಸ್ಯೆಯನ್ನು ಸರಕಾರ ಬಗೆಹರಿಸಲಿ-ಜಯರಾಮ ಬಿ.ನ್
ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಎಲ್ಲವೂ ಸಾಧ್ಯ-ಬಿ.ಎ.ನಾರಾಯಣ
24 ವರ್ಷಗಳಲ್ಲಿ ಸರಕಾರದೊಂದಿಗೆ ಮಾತುಕತೆ ನಡೆದರೂ ಪ್ರಯೋಜನ ಇಲ್ಲ-ಪ್ರಜ್ವಲ್ ಕುಮಾರ್
ಸಂಘಟನೆಯಿಂದ ನಾವೆಲ್ಲ ಬಲಿಷ್ಠರಾಗಿದ್ದೇವೆ-ಜಯಂತ್ ಉರ್ಲಾಂಡಿ
ರಾಜ್ಯಾದ್ಯಂತ ಸರಕಾರವನ್ನು ಎಚ್ಚರಿಸುವ ಕೆಲಸವಾಗಬೇಕು-ಈಶ್ವರ ಕುಲಾಲ್

ಪುತ್ತೂರು:ಆಧುನಿಕ ಜಗತ್ತಿನಲ್ಲಿ ಫ್ಯಾಷನ್ ಉಡುಗೆ ಬಂದರೂ ಜನರು ಮಾತ್ರ ತಮ್ಮ ಹಳೆಯ ಶೈಲಿಯ ಬಟ್ಟೆ ಧರಿಸುವುದನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದು ಇದು ಭಾರತೀಯ ಸಂಸ್ಕೃತಿಯ ಮೆರುಗಾಗಿದೆ.ಅನಾದಿ ಕಾಲದಿಂದಲೂ ಟೈಲರಿಂಗ್ ವೃತ್ತಿ ಮಾಡಿಕೊಂಡೇ ಬದುಕನ್ನು ಕಟ್ಟಿದ ಅನೇಕರು ನಮ್ಮ ಸಮಾಜದಲ್ಲಿ ಇದ್ದಾರೆ.ಟೈಲರಿಂಗ್ ವೃತ್ತಿಯನ್ನು ಮಾಡಿಕೊಂಡು ಬಡತನದಲ್ಲೇ ಜೀವನ ಸಾಗಿಸುವ ಕುಟುಂಬಗಳೂ ಇವೆ,ಟೈಲರಿಂಗ್ ವೃತ್ತಿ ಮಾಡುವ ಬಡ ಟೈಲರ್‌ಗಳಿಗೆ ಜೀವನಕ್ಕೆ ಭದ್ರತೆ ನೀಡಬೇಕಾದ ಅವಶ್ಯಕತೆ ಇದ್ದು ನಿಮ್ಮ ಬೇಡಿಕೆಗಳ ಬಗ್ಗೆ ವಿಧಾನಸಭೆಯನ್ನು ಧ್ವನಿ ಎತ್ತುವ ಮೂಲಕ ಸರಕಾರದ ಗಮನಕ್ಕೆ ತರುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಜು.30ರಂದು ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್(ಕೆಎಸ್‌ಟಿಎ)ಇದರ ಪುತ್ತೂರು ಕ್ಷೇತ್ರ ಸಮಿತಿಯ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಟೈಲರಿಂಗ್ ವೃತ್ತಿಗೆ ಇಂದು ಆಧುನಿಕತೆಯ ಟಚಪ್ ದಾಳಿ ಮಾಡಿದೆ.ಹೊರ ಜಿಲ್ಲೆಗಳಿಂದ ಬರುವ ಫ್ಯಾಷನ್ ಡಿಸೈನ್ ವೃತ್ತಿಯವರು ದುಬಾರಿ ಬೆಲೆಗೆ ಟೈಲರಿಂಗ್ ಕೆಲಸವನ್ನು ಮಾಡುತ್ತಿದ್ದಾರೆ,ಆದರೆ ಬಡ ಟೈಲರ್‌ಗಳು ಅಂದಿನಿಂದ ಇಂದಿನ ತನಕ ಬಡವನಾಗಿಯೇ ತನ್ನ ಕಸುಬನ್ನು ಮಾಡುತ್ತಿದ್ದು ಅವರಿಗೆ ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ ಎಂದ ಶಾಸಕರು, ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಟೈಲರಿಂಗ್ ಕಾರ್ಮಿಕರನ್ನು ಸೇರಿಸುವ ಬಗ್ಗೆ ತಾನು ಆ ಇಲಾಖೆಯ ಸಚಿವರ ಜೊತೆ ಮಾತುಕತೆ ನಡೆಸಿ ತನ್ನಿಂದಾಗುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದರು.


24 ವರ್ಷಗಳಿಂದ ಸರಕಾರ ಪರಿಗಣಿಸಿಲ್ಲ: ಕಳೆದ ೨೪ ವರ್ಷಗಳಿಂದ ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದರೂ ಇದುವರೆಗೂ ಅದನ್ನು ಯಾವುದೇ ಸರಕಾರ ಪರಿಗಣಿಸಿಲ್ಲ ಎಂದು ಸಮಿತಿಯ ಪ್ರಮುಖರು ಶಾಸಕರ ಗಮನಕ್ಕೆ ತಂದರು.ಈ ವೇಳೆ ಪ್ರತಿಕ್ರಿಯೆ ನೀಡಿದ ಶಾಸಕರು ಸಭೆಯಲ್ಲಿ,ಸಾರ್ವಜನಿಕ ವೇದಿಕೆಯಲ್ಲಿ ನಾವು ಬೊಬ್ಬೆ ಹೊಡೆದರೆ ಯಾವುದೇ ಪ್ರಯೋಜನವಿಲ್ಲ ಮಾತನಾಡುವಲ್ಲಿ ಮಾತನಾಡಬೇಕು, ಕೇಳುವವರಲ್ಲಿ ಕೇಳಿದರೆ ಅದಕ್ಕೆ ಪರಿಹಾರ ಸಿಗಬಹುದು ಮತ್ತು ಬೇಡಿಕೆಯನ್ನು ಈಡೇರಿಸಿಕೊಳ್ಳಬಹುದು.ಈ ನಿಟ್ಟಿನಲ್ಲಿ ನಾನು ಖಂಡಿತಾ ಪ್ರಯತ್ನ ಪಡುವುದಾಗಿ ಹೇಳಿದರು.
ಕೆಎಸ್‌ಟಿಎ ಪುತ್ತೂರು ಕ್ಷೇತ್ರ ಸಮಿತಿಯ ಅಧ್ಯಕ್ಷ ಜಯರಾಮ ಬಿ.ಎನ್ ಅಧ್ಯಕ್ಷತೆ ವಹಿಸಿದ್ದರು.


ಸನ್ಮಾನ:
ಹಿರಿಯ ಟೈಲರ್ ವೃತ್ತಿ ಬಾಂಧವರಲ್ಲಿ ಉಪ್ಪಿನಂಗಡಿ ವಲಯದ ಕೃಷ್ಣ ನಾಯ್ಕ ಮತ್ತು ಸವಣೂರು ವಲಯದ ವೆಂಕಪ್ಪ ಗೌಡರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಟೈಲರ್ ಎಸೋಸಿಯೇಶನ್ ಸಮಿತಿಯ ೯ ವಲಯದ ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಗುರುತಿಸಲಾಯಿತು.2021,2022,2023 ಸಾಲಿನಲ್ಲಿ ಪದಾಧಿಕಾರಿಗಳಾಗಿ ಆಯ್ಕೆಗೊಂಡು ಈವರೆಗೆ ಕಾರ್ಯ ನಿರ್ವಹಿಸಿದ ಅಧ್ಯಕ್ಷ, ಕಾರ್ಯದರ್ಶಿ,ಕೋಶಾಧಿಕಾರಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ಸಭೆಯಲ್ಲಿ 450 ಸದಸ್ಯರು ಉಪಸ್ಥಿತರಿದ್ದರು.2022-2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಟೈಲರ್‍ಸ್ ಅಸೋಸಿಯೇಶನ್ ಸಮಿತಿ ಸದಸ್ಯರ ಮಕ್ಕಳಾದ ಕಾಣಿಯೂರು ವಲಯದ ಯಶ್ವಿತ್ ಡಿ.ವಿ, ಪಾಣಾಜೆ ವಲಯದ ವೈಷ್ಣವಿ ಸಿ., ಉಪ್ಪಿನಂಗಡಿ ವಲಯದ ಹರ್ಷಿತಾ ಡಿ, ಈಶ್ವರಮಂಗಲ ವಲಯದ ಅವನಿ ಬಿ.ಎಲ್., ನಗರ ವಲಯದ ಪ್ರತಿಜ್ಞಾ ಜಿ,ತನ್ವಿ ಎಚ್.ಬಿ.,ಶ್ರೀರಾಮ ಘಾಟೆ ಇವರಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ದೇವ ಟ್ರೇಡರ್‍ಸ್ ಮಾಲಕರಾದ ಟಿ.ವಿ.ರವೀಂದ್ರನ್‌ರವರು ಟೈಲರ್ ಎಸೋಸಿಯೇಶನ್ ಸದಸ್ಯರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ ಧನಸಹಾಯ ನೀಡಿ ಸಮಿತಿಯೊಂದಿಗೆ ಸಹಕರಿಸಿದರು.


ವೇದಿಕೆಯಲ್ಲಿ ಕೆಎಸ್‌ಟಿ ರಾಜ್ಯ ಸಮಿತಿ ಅಧ್ಯಕ್ಷರಾದ ಬಿ.ಎ.ನಾರಾಯಣ, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಪ್ರಜ್ವಲ್‌ಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷರಾದ ಜಯಂತ ಉರ್ಲಾಂಡಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಗೋಧರ ಆಚಾರ್ಯ, ಜಿಲ್ಲಾ ಸಮಿತಿ ಕೋಶಾಧಿಕಾರಿ ಈಶ್ವರ ಕುಲಾಲ್, ಪುತ್ತೂರು ಸಮಿತಿ ಕಾರ್ಯದರ್ಶಿ ಉಮಾ ಯು ನಾಕ್, ಕೋಶಾಧಿಕಾರಿ ಸುಜಾತ ಮಂದಾರ, ಪ್ರೇಮಲತಾ ಶೆಟ್ಟಿ, ದಾಮೋದರ ಶೆಟ್ಟಿಗಾರ್, ಕೇಶವ ಕದ್ರಿ, ಯಶೋಧರ್ ಜೈನ್, ನಾಗೇಶ್ ಕುಲಾಲ್ ಉಪಸ್ಥಿತರಿದ್ದರು.ಪಾಣಾಜೆ ವಲಯದ ಸುರೇಖ ಪ್ರಾರ್ಥಿಸಿದರು.ರಾಜ್ಯ ಸಮಿತಿ ಆಂತರಿಕ ಲೆಕ್ಕ ಪರಿಸೋಧಕರಾದ ಬಿ.ರಘುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಉಮಾ ನಾಕ್ ವಂದಿಸಿದರು.ಶಂಭು ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೆಎಸ್‌ಟಿ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಪ್ರಮುಖರ ಅನಿಸಿಕೆಗಳು
ಟೈಲರ್‌ಗಳ ಸಮಸ್ಯೆಯನ್ನು ಇನ್ನಾದರೂ ಸರಕಾರ ಬಗೆಹರಿಸಲಿ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ ಬಿ.ಎನ್.ಹೇಳಿದರು.ಟೈಲರ್ ವೃತ್ತಿ ಬಾಂಧವರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಎಲ್ಲವೂ ಸಾಧ್ಯ ಎಂದು ಕೆಎಸ್‌ಟಿಎ ರಾಜ್ಯ ಸಮಿತಿ ಸದಸ್ಯ ಬಿ.ಎ.ನಾರಾಯಣ ಹೇಳಿದರು.ಈ ಹಿಂದೆ ೨೪ ವರ್ಷಗಳಲ್ಲಿ ಸರಕಾರದೊಂದಿಗೆ ಮಾತುಕತೆ ನಡೆದರೂ ಪ್ರಯೋಜನವಾಗಿಲ್ಲ ಎಂದು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಪ್ರಜ್ವಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ಸಂಘಟನೆಯಿಂದಾಗಿ ಇಂದು ನಾವೆಲ್ಲ ಬಲಿಷ್ಠರಾಗಿzವೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ ಉರ್ಲಾಂಡಿ ಹೇಳಿದರು.ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸರಕಾರವನ್ನು ಎಚ್ಚರಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಸಮಿತಿ ಕೋಶಾಧಿಕಾರಿ ಈಶ್ವರ ಕುಲಾಲ್ ಹೇಳಿದರು.

ಪುತ್ತೂರು ಕ್ಷೇತ್ರ ಸಮಿತಿ ಪದಾಧಿಕಾರಿಗಳ ಆಯ್ಕೆ
ಇದೇ ಸಂದರ್ಭದಲ್ಲಿ ಕ್ಷೇತ್ರ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಉಮಾ ಯು ನಾಕ್ ಕೊಂಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರಾ ಬಿ.ಸಿ ಕುಂಬ್ರ, ಉಪಾಧ್ಯಕ್ಷರಾಗಿ ನಗರ ವಲಯದ ಯಶೋಧರ ಜೈನ್ ದರ್ಬೆ, ಉಪಾಧ್ಯಕ್ಷರಾಗಿ ಸವಣೂರು ವಲಯದ ಜಗನ್ನಾಥ ಗೌಡ, ಜೊತೆ ಕಾರ್ಯದರ್ಶಿಯಾಗಿ ನಗರ ವಲಯದ ಭಾರತಿ ಎಚ್ ಏಳ್ಮುಡಿ, ಜೊತೆ ಕಾರ್ಯದರ್ಶಿಯಾಗಿ ಪಾಣಾಜೆ ವಲಯದ ಶೇಷನ್, ಸಂಘಟನಾ ಕಾರ್ಯದರ್ಶಿಯಾಗಿ ನಗರ ವಲಯದ ಪುತ್ತೂರು ಇದರ ಪವಿತ್ರ ಯನ್ ರೈ ಕೃಷ್ಣನಗರ, ಕೋಶಾಧಿಕಾರಿಯಾಗಿ ಪರಮೇಶ್ವರ ಕಾಣಿಯೂರುರವರು ಆಯ್ಕೆಯಾದರು.


LEAVE A REPLY

Please enter your comment!
Please enter your name here