ಪುತ್ತೂರು: ಆಗಸ್ಟ್ 1 ರಿಂದ 12ರವರೆಗೆ ಡ್ರಾ ಯುವರ್ ಡ್ರೀಮ್ ಎಂಬ ಧ್ಯೇಯದೊಂದಿಗೆ ಸೌತ್ ಕೊರಿಯಾದ SaeManGeum ಎಂಬಲ್ಲಿ ನಡೆಯಲಿರುವ 25ನೇ ಅಂತರಾಷ್ಟ್ರೀಯ ಜಾಂಬೂರಿ 2023ರಲ್ಲಿ ಭಾರತ ದೇಶವನ್ನು ಪ್ರತಿನಿದಿಸಲು ಪುತ್ತೂರಿನಿಂದ 23 ಮಂದಿ ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಭಾಗವಹಿಸಲಿದ್ದಾರೆ.
ಇವರೊಂದಿಗೆ ಸ್ಥಳೀಯ ಕಾರ್ಯಕಾರಿ ಸಮಿತಿಯ ಜೊತೆ ಕಾರ್ಯದರ್ಶಿ , ಎಲ್‌ಟಿ ಗೈಡ್ ಕ್ಯಾಪ್ಟನ್ ಸುನೀತಾ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯೆ, ಗೈಡ್ ಕ್ಯಾಪ್ಟನ್ ಮೈತ್ರೇಯಿ ಭಾಗವಹಿಸಲಿದ್ದಾರೆ. ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಸದಸ್ಯರು ಶುಭವನ್ನು ಹಾರೈಸುತ್ತಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
