ಪರವೂರಲ್ಲಿರುವ ಪುತ್ತೂರಿನವರು: ಸಿರಿಕನ್ನಡ ‘ಲಿಟ್ಲ್ ಸೂಪರ್ ಸ್ಟಾರ್’ ನಲ್ಲಿ ಕಡಮಜಲು ಮೊಮ್ಮಗಳು ನಿಶ್ಚಿತಾ ಡಿ.ಎಂ.

0

ಪುತ್ತೂರು: ರಾಜ್ಯದ ಪ್ರಮುಖ ಕನ್ನಡ ವಾಹಿನಿಗಳಲ್ಲೊಂದಾದ ಸಿರಿಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗಲಿರುವ ಕ್ಯಾಡ್‌ಬರಿ ಜೆಮ್ಸ್ ‘ಲಿಟ್ಲ್ ಸೂಪರ್ ಸ್ಟಾರ್’ ಕಾರ್ಯಕ್ರಮದ ಆಡಿಷನ್ ನಲ್ಲಿ ಕಡಮಜಲು ಸುಭಾಸ್ ರೈಯವರ ಮೊಮ್ಮಗಳು ಬೇ.ನಿಶ್ಚಿತಾ ಡಿ.ಎಂ.ರವರು ಭಾಗವಹಿಸಿ ಉತ್ತಮ ಅಭಿನಯಕ್ಕಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ‌ ಡಿ.ಆರ್.ಡಿ.ಒ.ವಿಜ್ಞಾನಿ ದುರ್ಗಾಪ್ರಸಾದ್ ಎಂ. ಮತ್ತು ವಿಂಧ್ಯಾ ದುರ್ಗಾಪ್ರಸಾದ್ ದಂಪತಿಯ ಪುತ್ರಿಯಾಗಿರುವ ಈಕೆ ಬೆಂಗಳೂರು ಡಿಆರ್‌ಡಿಒ ಕೇಂದ್ರೀಯ ಶಾಲೆಯಲ್ಲಿ ಯುಕೆಜಿ ತರಗತಿಯ ಪ್ರತಿಭಾನ್ವಿತ ಪುಟಾಣಿ.


ಜು.29ರಂದು ಬೆಂಗಳೂರಿನ ಸ್ಟುಡಿಯೋ ಒಂದರಲ್ಲಿ ಆಡಿಷನ್ ನಡೆದಿದ್ದು, ಈ ವೇಳೆ ‘ವಿಕ ಸೂಪರ್ ಸ್ಟಾರ್ ರೈತ’ ಕಡಮಜಲು ಸುಭಾಸ್ ರೈ, ಪ್ರೀತಿ ಎಸ್. ರೈ ಮತ್ತು ವಿಂಧ್ಯಾ ದುರ್ಗಾಪ್ರಸಾದ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here