ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವುದು ಒಂದು ಸವಾಲು: ಗಂಗಾಧರ ಆಳ್ವ ಅನಂತಾಡಿ
ಇವರಿಬ್ಬರ ನಿವೃತ್ತಿ ನಮ್ಮ ಸಂಸ್ಥೆಗೆ ಬಲು ದೊಡ್ಡ ನಷ್ಟ: ಕಿರಣ್ ಹೆಗ್ಡೆ
ವಿಟ್ಲ: ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವುದು ಒಂದು ಸವಾಲು. ಇಲ್ಲಿ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಕೆಟ್ಟ ಕೆಲಸದಷ್ಟು ಬೇಗ ಪ್ರಚಾರ ಪಡೆದುಕೊಳ್ಳುವುದಿಲ್ಲ , ವೃತ್ತಿಗೆ ನಿವೃತ್ತಿಯೇ ಹೊರತು ಶಿಕ್ಷಕನಿಗೆ ನಿವೃತ್ತಿಯೇ ಇಲ್ಲ ಎಂದು ತುಂಬೆ ಪ. ಪೂ.ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಆಳ್ವ ಅನಂತಾಡಿರವರು ಹೇಳಿದರು.
ಅವರು ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ನಡೆದ ಮುಖ್ಯ ಶಿಕ್ಷಕ ಬಿ.ಕೆ.ಕೆ ಭಂಡಾರಿ ಹಾಗೂ ಕನ್ನಡ ಶಿಕ್ಷಕ ಎಂ.ಕೆ. ಬಾಲಕೃಷ್ಣರವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಭಿವರ್ಧಕ ಸಂಘ ಮಾಣಿ ಇದರ ಅಧ್ಯಕ್ಷರಾದ ಕಿರಣ್ ಹೆಗ್ಡೆರವರು ಮಾತನಾಡಿ ಬಿ.ಕೆ. ಭಂಡಾರಿ ಒಬ್ಬ ಉತ್ತಮ ಆಡಳಿತಗಾರ, ಪರಿಹಾರೋಪಾಯ, ಕಾನೂನಿನ ಅರಿವು ಆಡಿಟ್ ಕೆಲಸ ಇತ್ಯಾದಿ ಬಲ್ಲವರಾಗಿದ್ದು ಜೆಸಿಐ ಸಂಸ್ಥೆಯಲ್ಲಿ ಪಳಗಿದವರು. ಎಂ. ಕೆ. ಬಾಲಕೃಷ್ಣರವರು ಸದಾ ಹಸನ್ಮುಖಿ, ಮತ್ತು ಸೌಮ್ಯ ಸ್ವಭಾವದವರಾಗಿದ್ದು ಇವರಿಬ್ಬರ ನಿವೃತ್ತಿ ನಮ್ಮ ಸಂಸ್ಥೆಗೆ ಬಲು ದೊಡ್ಡ ನಷ್ಟ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಗಂಗಾಧರ್ ರೈ ರವರು ಮಾತನಾಡಿ ಈ ವಿದ್ಯಾಸಂಸ್ಥೆಯ ಸ್ಥಾಪಕರಾದ ದಿ. ಹಾಜಿ ಅಬ್ದುಲ್ ಖಾದರ್ ಮತ್ತು ದಿ. ಸಂಕಪ್ಪ ರೈ ಗಳ ದೂರದರ್ಶಿತ್ವದಿಂದ ನಮ್ಮಂತಹ ಅನೇಕ ಮಂದಿಗೆ ಜೊತೆಯಾಗಿ ಕೆಲಸ ಮಾಡಲು, ಒಂದು ಕುಟುಂಬದಂತೆ ಬಾಳಲು ಈ ವಿದ್ಯಾ ಸಂಸ್ಥೆ ಅವಕಾಶ – ಆಸರೆಯಾಗಿದೆ ಎಂದರು.
ಶಿಕ್ಷಣ ಇಲಾಖೆಯ ಪರವಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಿ.ಆರ್.ಪಿ. ಸತೀಶ್ ರಾವ್ ರವರು ಮಾತನಾಡಿ ತಾಲೂಕಿನಲ್ಲಿಯೇ ವಲಯ ಮತ್ತು ತಾಲೂಕು ಮಟ್ಟದ ಕಾರ್ಯಕ್ರಮಗಳ ಆಯೋಜನೆ ಮಾಣಿಯಲ್ಲಿ ಯಶಸ್ವಿಯಾಗಿ ಮಾಡುವುದರ ಹಿಂದಿನ ಶಕ್ತಿಯೇ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ.ಕೆ. ಭಂಡಾರಿ ಮತ್ತು ತಂಡ ಎಂದರು.
ಸನ್ಮಾನಿನ ಸ್ವೀಕರಿಸಿ ಬಿ.ಕೆ.ಭಂಡಾರಿರವರು ಮಾತನಾಡಿ ಬದುಕು ಒಂದು ಪಾಠಶಾಲೆ, ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಹೊಸದನ್ನು ಕಲಿತು ಕಾಲದೊಂದಿಗೆ ಹೆಜ್ಜೆ ಹಾಕಿದರೆ ಮಾತ್ರ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಗೆ ಉಳಿವು ಎಂದು ಹೇಳಿದ ಅವರು ಸಹೋದ್ಯೋಗಿ ಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಇನ್ನೋರ್ವ ಸನ್ಮಾನ ಸ್ವೀಕರಿಸಿದ ಶಿಕ್ಷಕರಾದ ಎಂ.ಕೆ. ಬಾಲಕೃಷ್ಣರವರು ಮಾತನಾಡಿ ನನ್ನ ವೃತ್ತಿ ಪಯಣದಲ್ಲಿ ಬೇರೆ ಬೇರೆ ರೀತಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ, ಈ ವಿದ್ಯಾ ಸಂಸ್ಥೆ ತನ್ನ ಹಿಂದಿನ ಗತ ವೈಭವ ಸಾರಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ವಿದ್ಯಾಭಿವರ್ಧಕ ಸಂಘ ಮಾಣಿ ಇದರ ಉಪಾಧ್ಯಕ್ಷರಾದ ಹಬೀಬ್ ಕೆ., ಕಾರ್ಯದರ್ಶಿ ಹಾಜಿ ಇಬ್ರಾಹಿಂ, ಜೊತೆ ಕಾರ್ಯದರ್ಶಿ ಕುಶಲ ಎಂ.ಪೆರಾಜೆ,ಕೋಶಾಧಿಕಾರಿ ಜಗನ್ನಾಥ ಚೌಟ ಬದಿಗುಡ್ಡೆ, ವನಿತಾ ಲಕ್ಷ್ಮೀ ನಾರಾಯಣ, ಶಿಕ್ಷಣ ಸಂಯೋಜಕಿ ಸುಜಾತ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಹರೀಶ್ ಮಾಣಿ ಮೊದಲಾದವರು ಉಪಸ್ಥಿತರಿದ್ದರು.
ವೇದಿಕೆಯ ಮುಂಬಾಗದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಸಿಕ್ಷಕರ ಸಂಘದ ಅಧ್ಯಕ್ಷರಾದ ಮಹಮ್ಮದ್ ರಿಯಾಜ್, ಕ. ರಾ.ಪ್ರೌ.ಶಾ. ಶಿ. ಸಂಘದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಜೋಯಲ್ ಲೋಬೋ, ರಾಜ್ಯ ಪರಿಷತ್ತಿನ ಸದಸ್ಯರಾದ ರಮಾನಂದ ನೂಜಿಪ್ಪಾಡಿ, ಜಿಲ್ಲಾ ಕಾರ್ಯದರ್ಶಿ ಶಶಿಕಾಂತ್ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ್ ಬ್ರಹ್ಮಾವರ,ಬಾಲವಿಕಾಸ ವಿದ್ಯಾ ಸಂಸ್ಥೆಯ ಸಂಚಾಲಕರಾದ ಪ್ರಹ್ಲಾದ್ ಶೆಟ್ಟಿ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಶಿಕ್ಷಕಿ ರಶ್ಮಿಫೆರ್ನಾಂಡಿಸ್, ರೋಟರಿ ಕ್ಲಬ್ಬಿನ ಪುಷ್ಪರಾಜ ಹೆಗಡೆ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಮಾಧವ ರೈ, ಬಾಲಕೃಷ್ಣ ಶೆಟ್ಟಿ, ಗಣೇಶ ಶೆಟ್ಟಿ, ಡಾ. ಬಿ.ಎಸ್. ನಾಯಕ್,ಡಾ. ಶ್ರೀನಾಥ್ ಆಳ್ವ ,ಅಮೈ ಭುಜಂಗ ಭಂಡಾರಿ, ಕೊರಗಪ್ಪ ಭಂಡಾರಿ, ಹೊನ್ನಕೊಡಂಗೆ ಭರತ ನಾರಾಯಣ ಪೆರ್ಗಡೆ, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ,ಸರ್ವೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ, ಉಪ್ಪಳಿಗೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ, ತುಂಬೆ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ ಕೆದಿಲ, ನಿವೃತ್ತ ಗ್ರಂಥಪಾಲಕ ರಾಮಚಂದ್ರ , ಶಾರದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭೋಜ, ಶಿಕ್ಷಕ ರಾದ ಅಜಿತ್ ರೈ ಧನರಾಜ್,ಮಾಣಿ ಪ್ರಾ.ಶಾ.ಮುಖ್ಯ ಶಿಕ್ಷಕಿ ಚಂದ್ರಾವತಿ, ನೇರಳಕಟ್ಟೆ ಪ್ರಾ.ಶಾ.ಮು.ಶಿ.ಚಂದ್ರಾವತಿ, ಶ್ರೀರಾಮ ಪ್ರೌಢಶಾಲೆ ನಿವೃತ್ತ ಮು. ಶಿ. ವಸಂತಿ, ಉಪನ್ಯಾಸಕ ಯತಿರಾಜ್, ಪೆರ್ನೆ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಶೇಖರ್,ಉಪನ್ಯಾಸಕರಾದ ಗಣೇಶ್ ರೈ ಇಂದಿರ,ಅನಿಲ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಭಾರ ಮು.ಶಿ. ಎಸ್ ಚೆನ್ನಪ್ಪ ಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಶಿಕ್ಷಕ ಜಯರಾಮ ಕೆ. ಮತ್ತು ಶ್ಯಾಮಲ ಕೆ. ಸನ್ಮಾನ ಪತ್ರ ವಾಚಿಸಿ ಗಂಗಾಧರ ಗೌಡ ವಂದಿಸಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.