ವಿಟ್ಲ: ತೀಯಾ ಸ್ನೇಹವಾಹಿನಿ ಒಕ್ಕೂಟದ ವತಿಯಿಂದ ಅಳಿಕೆ ಮೂಡಾಯಿಬೆಟ್ಟು ಕೃಷಿಗದ್ದೆಯಲ್ಲಿ ನಡೆದ ಕಂಡೊದ ಕೆಸರ್ಡ್ ಕುಸಾಲ್ದ ಗೊಬ್ಬುಲು, ಆಟಿದ ಅಟ್ಟಿಲ್ದ ಪಂತೋ ಕಾರ್ಯಕ್ರಮ ನಡೆಯಿತು. ಶ್ರೀ ಭಗವತೀ ಕ್ಷೇತ್ರದ ಆಚಾರ ಪಟ್ಟವರಾದ ಗೋಪಾಲ ಬೆಳ್ಚಪ್ಪಾಡ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾಜದ ಹಿರಿಯರು ಸಾಮಾಜಿಕ ಮುಂದಾಳು ಜಯರಾಮ ಉಕ್ಕುಡ ರವರು ಕಳಸೆಗೆ ಭತ್ತ ತುಂಬುವ ಮುಖೇನಾ, ಬೋಳ್ನಾಡು ಕ್ಷೇತ್ರದ ಬಾಲಾಲಯದಲ್ಲಿ ದೀಪ ಬೆಳಗುವ ಚಂದ್ರಶೇಖರ ಮಡಿಯಾಲ ರವರು ಗದ್ದೆಗೆ ಹಾಲೆರೆದು, ವೇದಿಕೆಯಲ್ಲಿ ಉಪಸ್ಥಿತರಿದ್ದ ಅಳಿಕೆ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಧ್ಯಪಕ ಶ್ರೀಧರ್ ಕೆ. ಮುಚ್ಚಿರಪದವು ಶಾಲೆಯ ಮುಖ್ಯೋಪಧ್ಯಾಯರಾದ ನಾಗೇಶ್ ಮಾಸ್ಟರ್ ಮೈರ, ಹಿರಿಯರಾದ ಅಪ್ಪುಕುಞ ಬೆಳ್ಚಾಡ, ಪುತ್ತೂರು ತೀಯಾಸಮಾಜ ನಿಂತಿಕಲ್ ವಲಯದ ಅಧ್ಯಕ್ಷ ಚಂದ್ರಶೇಖರ್, ಅಳಿಕೆ ವಿದ್ಯಾಸಂಸ್ಥೆಯ ಪ್ರಾಧ್ಯಾಪಕ ಯಾದವ ನಡುಗುತ್ತು, ಪಂಜದ ಉದ್ಯಮಿ ಯುವ ನೇತಾರ ಮನು ತೊಂಡಚ್ಚ ಕನ್ಸ್ಟ್ರಕ್ಷನ್ ಒಟ್ಟು ಸೇರಿ ಗದ್ದೆಗೆ ಭತ್ತ ಬಿತ್ತನೆ ಮಾಡಿ ಆಟೋಟಗಳಿಗೆ ಚಾಲನೆ ನೀಡಿದರು.
ಆಟಿದ ಅಟ್ಟಿಲ್ದ ಪಂತೋದಲ್ಲಿ 34 ಮನೆಗಳಿಂದ ವಿವಿಧ ತಿಂಡಿ ತಿನಿಸುಗಳನ್ನು ತರಲಾಗಿತ್ತು. ಈ ವಿಶೇಷ ಸ್ಪರ್ಧೆಯ ನಿರ್ಣಾಯಕರಾಗಿ ಅಶ್ವಿನಿ ವರ್ಕಾಡಿ, ಮಾಧವ ಕೇಪುಳಗುಡ್ಡೆಯವರು ಸಹಕರಿಸಿದರು. ಗದ್ದೆಯಲ್ಲಿ ಮನೋರಂಜಿತ, ವೈಶಿಷ್ಠ್ಯದಿಂದ ಕೂಡಿದ ಆಟೋಟಗಳು ನಡೆದವು ವಿಶೇಷವಾಗಿ ಆಯೋಜಿಸಿದ ಸ್ಪರ್ಧೆಗಳಿಗೆ ಅಕ್ಕಿಮುಡಿ ಹಾಗೂ ಇತರ ಸ್ಪರ್ದೆಗಳಿಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಆನಂದ ಗುರಿಕಾರ,ರಾಘವ ಗುರಿಕಾರ ಕೇಪುಳಗುಡ್ಡೆ ಕುಟ್ಟಿತ್ತಡ್ಕ, ಪುರುಷೊತ್ತಮ ಪುತ್ತೂರು, ಗುವೆದಪಡ್ಪು ವಿಷ್ಣುಮೂರ್ತಿ ಸೇವಾಸಮಿತಿ ಅಧ್ಯಕ್ಷ ಸೋಮಪ್ಪ ಬೆಳ್ಚಾಡ ಗುವೆದಪಡ್ಪು,ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಎಲ್ಲಾ ಭಾಗದ ತೀಯಾ ಸಮಾಜದವರು ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಮೀಳಾ ನವೀನ್ ಮೂಡಾಯಿಬೆಟ್ಟು ಪ್ರಾರ್ಥಿಸಿ, ಸಂತೋಷ್ ಮುರ ಸ್ವಾಗತಿಸಿ, ಸುರೇಶ್ ವಿಟ್ಲ ವಂದಿಸಿದರು. ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
ಆಟೋಟ ಹಾಗೂ ಇನ್ನಿತರ ವ್ಯವಸ್ಥೆಗಳ ನಿರ್ವಾಹಕರಾಗಿ ರಾಜೇಶ್ ಕರವೀರ, ಶಿವರಾಮ ಮೂಡಾಯಿಬೆಟ್ಟು,ರಾಘವೇಂದ್ರ ಪ್ರಸಾದ್, ಹರೀಶ್ ಆಲಂಗಾರ್, ಅಶೋಕ್ ಕರವೀರ, ಸಂತೋಷ್ ಕರವೀರ, ನವೀನ್ ಮೂಡಾಯಿಬೆಟ್ಟು, ಸಂತೋಷ್ ಮೂಡಾಯಿಬೆಟ್ಟು ,ಸಂತೋಷ್ ಎರುಂಬು, ಶಿವಪ್ರಸಾದ್ ಮೂಡಾಯಿಬೆಟ್ಟು,ಅಜೇಯ್ ನೀರ್ಕಜೆ, ಪ್ರವೀಣ್ ನೀರ್ಕಜೆ, ಸತೀಷ್ ವಿಟ್ಲ, ಕೃಷ್ಣಮೈರ, ಸುನೀಲ್ ವಿಟ್ಲ,ಮಿಥುನ್,ಹರ್ಷಿತ್ ಚೆಂಡುಕಳ,ಸೌಮ್ಯ ಮೂಡಾಯಿಬೆಟ್ಟು,ಪ್ರಮಿಳ ಮೂಡಾಯಿಬೆಟ್ಟು,ಭವ್ಯ ಮೂಡಾಯಿಬೆಟ್ಟು,ಸ್ವಸ್ಥಿಕ್ ನೀರ್ಕಜೆ,ನವೀನ್ ಮೂಡಾಯಿಬೆಟ್ಟು,ಕೃಷ್ಣಪ್ಪ ನೆಕ್ಕಿತ್ತಪುಣಿ, ಚಂದ್ರಶೇಖರ್ ವಿಟ್ಲ,ಸುಮಲತ ಕರವೀರ ಸಹಕರಿಸಿದರು.