ಆರ್ಯಾಪು ವಲಯ ಸಂಚಾಲಕರಾಗಿ ಮಾಧವ ಪೂಜಾರಿ ರೆಂಜ ಆಯ್ಕೆ
ನಿಡ್ಪಳ್ಳಿ: ಇರ್ದೆ ಬೆಟ್ಟಂಪಾಡಿ ಬಿಲ್ಲವ ಗ್ರಾಮ ಸಮಿತಿ ಹಾಗೂ ಬಿಲ್ಲವ ಮಹಿಳಾ ವೇದಿಕೆ ಇದರ ವಾರ್ಷಿಕ ಮಹಾಸಭೆ ಸಮಿತಿಯ ಅಧ್ಯಕ್ಷ ವಿಠಲ ಪೂಜಾರಿ ಚೆಲ್ಯಡ್ಕ ಇವರ ಅಧ್ಯಕ್ಷತೆಯಲ್ಲಿ ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆಯಿತು.
ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಜಿ.ಚಿದಾನಂದ ಸುವರ್ಣ ಗೆಣಸಿನಕುಮೇರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷೆ ಚಂದ್ರಕಲಾ, ತಾಲೂಕು ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲ, ಆರ್ಯಾಪು ವಲಯ ಸಂಚಾಲಕ ರಾಜೇಶ್ ಆರ್ಲಪದವು, ಯುವವಾಹಿನಿ ಪುತ್ತೂರು ಅಧ್ಯಕ್ಷ ಉಮೇಶ್ ಬಾಯಾರ್, ಪುತ್ತೂರು ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಮಾಧವ ಪೂಜಾರಿ ರೆಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇರ್ದೆ ಬೆಟ್ಟಂಪಾಡಿ ಗ್ರಾಮದ ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ ಮಾಡಲಾಯಿತು.
ಗ್ರಾಮ ಸಮಿತಿ ರಚನೆ:
ಮುಂದಿನ ಒಂದು ವರ್ಷದ ಅವಧಿಗೆ ಹಾಲಿ ಅಧ್ಯಕ್ಷ ವಿಠಲ ಪೂಜಾರಿಯವರನ್ನೆ ಅಧ್ಯಕ್ಷರನ್ನಾಗಿ ಮುಂದುವರಿಸಲು ನಿರ್ಧರಿಸಲಾಯಿತು.ಉಪಾಧ್ಯಕ್ಷರಾಗಿ ಮಂಜುನಾಥ ಪತ್ತನಡ್ಕ, ಕಾರ್ಯದರ್ಶಿಯಾಗಿ ದೀಕ್ಷಿತ್ ಇರ್ದೆ, ಕೋಶಾಧಿಕಾರಿಯಾಗಿ ಸುನಿಲ್ ಇರ್ದೆ ಇವರನ್ನು ಆರಿಸಲಾಯಿತು.
ವಲಯ ಸಂಚಾಲಕರಾಗಿ ಮಾಧವ ಪೂಜಾರಿ ಹಾಗೂ ಆರು ಗ್ರಾಮ ಸಮಿತಿಯನ್ನೊಳಗೊಂಡ ಆರ್ಯಾಪು ವಲಯದ ಸಂಚಾಲಕರಾಗಿ ಮಾಧವ ಪೂಜಾರಿ ರೆಂಜ ಇವರು ಆಯ್ಕೆಯಾದರು. ಮಹಿಳಾ ವೇದಿಕೆಯ ಅಧ್ಯಕ್ಷರಾದ ಶಕುಂತಳ ನೇಮು ಪೂಜಾರಿ ಬೆಟ್ಟಂಪಾಡಿ ಸ್ವಾಗತಿಸಿ ಶ್ಯಾಮಲ ಯಂ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸೌಜನ್ಯ ಹೊಸಲಕ್ಕೆ ವಂದಿಸಿದರು.ಇರ್ದೆ ಬೆಟ್ಟಂಪಾಡಿ ಗ್ರಾಮದ ಬಿಲ್ಲವ ಸಮಾಜ ಬಾಂಧವರು ಪಾಲ್ಗೊಂಡರು.