ಜಿ.ಪಂ., ತಾ.ಪಂ. ಕ್ಷೇತ್ರಗಳ ಮರು ವಿಂಗಡಣೆ: ಕಡಬ ತಾಲೂಕಿಗೆ

0

3 ಜಿ.ಪಂ. 12 ತಾ.ಪಂ. ಕ್ಷೇತ್ರಗಳು
ತಾಲೂಕಿನ ಜಿ.ಪಂ. ಕ್ಷೇತ್ರಗಳ ವಿಶೇಷತೆ: ಸುಬ್ರಹ್ಮಣ್ಯ ಜಿ.ಪಂ. ಕ್ಷೇತ್ರ 5 ತಾ.ಪಂ.ಕ್ಷೇತ್ರ ಹಾಗೂ 16 ಗ್ರಾಮಗಳನ್ನೊಳಗೊಂಡು ದೊಡ್ಡ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.(38019 ಮತದಾರರು). ನೆಲ್ಯಾಡಿ ಜಿ.ಪಂ. ಕ್ಷೇತ್ರವು 4 ತಾ.ಪಂ. ಕ್ಷೇತ್ರ ಹಾಗೂ 12 ಗ್ರಾಮಗಳನ್ನೊಳಗೊಂಡು ಸುಬ್ರಹ್ಮಣ್ಯ ಜಿ.ಪಂ. ಕ್ಷೇತ್ರಕ್ಕಿಂತ ಹೆಚ್ಚು (41168) ಮತದಾರರನ್ನು ಹೊಂದಿ ದೊಡ್ಡ ಮತದಾರರಿರುವ ಕ್ಷೇತ್ರವಾಗಿದೆ. ಐತ್ತೂರು ಜಿ.ಪಂ.ಕ್ಷೇತ್ರ ಉಳಿದೆರಡು ಕ್ಷೇತ್ರಗಳಿಂತ ಕಡಿಮೆ ತಾ.ಪಂ. ಕ್ಷೇತ್ರಗಳು ಹಾಗೂ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಕಳೆದ ಅವಽಗೆ ಹೋಲಿಸಿದರೆ, ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳಲ್ಲಿ ಕೆಲವೊಂದು ಬದಲಾವಣೆ ಕಂಡು ಬಂದಿದೆ.

ಕಡಬ: ಕಡಬ ತಾಲೂಕಿನ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳನ್ನು ವಿಂಗಡಣೆ ಮಾಡಿ ಪ್ರಕಟಿಸಲಾಗಿದೆ. ಕಡಬ ತಾಲೂಕಿನಲ್ಲಿ ಒಟ್ಟು 3 ಜಿ.ಪಂ. ಹಾಗೂ 12 ತಾ.ಪಂ. ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ಕಡಬ ತಾಲೂಕಿನಲ್ಲಿ 55118 ಪುರುಷ ಮತದಾರರು ಮತ್ತು 55323 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,10,441 ಮತದಾರರಿದ್ದಾರೆ.
ತಾಲೂಕಿನಲ್ಲಿ ನೆಲ್ಯಾಡಿ, ಸುಬ್ರಹ್ಮಣ್ಯ, ಐತ್ತೂರು ಜಿ.ಪಂ. ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ಅಂತೆಯೇ ಕೊಯಿಲ, ಆಲಂಕಾರು, ನೆಲ್ಯಾಡಿ, ಕೌಕ್ರಾಡಿ, ಸುಬ್ರಹ್ಮಣ್ಯ, ಎಡಮಂಗಲ, ಸವಣೂರು, ಚಾರ್ವಾಕ, ಕುದ್ಮಾರು, ಐತ್ತೂರು, ನೂಜಿಬಾಳ್ತಿಲ, ಕುಟ್ರುಪಾಡಿ ಒಟ್ಟು 12 ತಾ.ಪಂ. ಕ್ಷೇತ್ರಗಳನ್ನಾಗಿ ಮಾಡಲಾಗಿದೆ.

ನೆಲ್ಯಾಡಿ ಜಿ.ಪಂ. ಕ್ಷೇತ್ರ: ನೆಲ್ಯಾಡಿ ಜಿ.ಪಂ. ಕ್ಷೇತ್ರದಲ್ಲಿ 20453 ಪುರುಷ ಮತದಾರರು ಹಾಗೂ 20715 ಮಹಿಳಾ ಮತದಾರರು ಸೇರಿದಂತೆ ಒಟ್ಟು 41168 ಮತದಾರರಿದ್ದಾರೆ. ಈ ಜಿ.ಪಂ. ಕ್ಷೇತ್ರ ಕೊಯಿಲ, ನೆಲ್ಯಾಡಿ, ಆಲಂಕಾರು, ಕೌಕ್ರಾಡಿ ಎಂಬ ನಾಲ್ಕು ತಾ.ಪಂ. ಕ್ಷೇತ್ರಗಳನ್ನು ಒಳಗೊಂಡಿದೆ.
ಸುಬ್ರಹ್ಮಣ್ಯ ಜಿ.ಪಂ. ಕ್ಷೇತ್ರ: ಸುಬ್ರಹ್ಮಣ್ಯ ಜಿ.ಪಂ.ಕ್ಷೇತ್ರದಲ್ಲಿ 19217 ಪುರುಷ ಮತದಾರರು ಹಾಗೂ 18802 ಮಹಿಳಾ ಮತದಾರರು ಸೇರಿದಂತೆ ಒಟ್ಟು 33019 ಮತದಾರರಿದ್ದಾರೆ. ಈ ಜಿ.ಪಂ. ಕ್ಷೇತ್ರ ಸುಬ್ರಹ್ಮಣ್ಯ, ಎಡಮಂಗಲ, ಸವಣೂರು, ಚಾರ್ವಾಕ, ಕುದ್ಮಾರು ಎಂಬ 5 ತಾ.ಪಂ. ಕ್ಷೇತ್ರಗಳನ್ನು ಒಳಗೊಂಡಿದೆ.
ಐತ್ತೂರು ಜಿ.ಪಂ. ಕ್ಷೇತ್ರ: ಐತ್ತೂರು ಜಿ.ಪಂ.ಕ್ಷೇತ್ರದಲ್ಲಿ 15448 ಪುರುಷ ಮತದಾರರು ಹಾಗೂ 15806 ಮಹಿಳಾ ಮತದಾರರು ಸೇರಿದಂತೆ ಒಟ್ಟು 31254 ಮತದಾರರಿದ್ದಾರೆ. ಈ ಜಿ.ಪಂ. ಕ್ಷೇತ್ರ ಐತ್ತೂರು, ನೂಜಿಬಾಳ್ತಿಲ, ಕುಟ್ರುಪಾಡಿ ಎಂಬ 3 ತಾ.ಪಂ. ಕ್ಷೇತ್ರಗಳನ್ನು ಒಳಗೊಂಡಿದೆ.

ತಾ.ಪಂ. ಕ್ಷೇತ್ರಗಳ ವಿವರ: ಕಡಬ ತಾಲೂಕಿನ ಒಟ್ಟು 42 ಗ್ರಾಮಗಳ ಪೈಕಿ ಈಗಾಗಲೇ ಕಡಬ, ಕೋಡಿಂಬಾಳ ಗ್ರಾಮಗಳು ಕಡಬ ಪಟ್ಟಣ ಪಂಚಾಯತ್ ಆಗಿರುವ ಹಿನ್ನಲೆಯಲ್ಲಿ ಉಳಿದ 40 ಗ್ರಾಮಗಳನ್ನು 12 ತಾ.ಪಂ. ಕ್ಷೇತ್ರಗಳಿಗೆ ವಿಂಗಡಿಸಲಾಗಿದೆ. ಅದರ ವಿವರ ಈ ಕೆಳಗಿನಂತಿದೆ.
ಕೊಯಿಲ ತಾ.ಪಂ. ಕ್ಷೇತ್ರ: ಕೊಯಿಲ, ರಾಮಕುಂಜ, ಹಳೆನೇರಂಕಿ ಗ್ರಾಮಗಳನ್ನೊಳಗೊಂಡು ಕೊಯಿಲ ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ತಾ.ಪಂ. ಕ್ಷೇತ್ರದಲ್ಲಿ ಒಟ್ಟು 12289 ಮತದಾರರಿದ್ದಾರೆ.
ನೆಲ್ಯಾಡಿ ತಾ.ಪಂ.ಕ್ಷೇತ್ರ: ನೆಲ್ಯಾಡಿ, ಕೊಣಾಲು, ಗೋಳಿತೊಟ್ಟು, ಆಲಂತಾಯ ಗ್ರಾಮಗಳನ್ನೊಳಗೊಂಡು ನೆಲ್ಯಾಡಿ ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದೆ, ಈ ತಾ.ಪಂ. ಕ್ಷೇತ್ರದಲ್ಲಿ ಒಟ್ಟು 12088 ಮತದಾರರಿದ್ದಾರೆ.
ಆಲಂಕಾರು ತಾ.ಪಂ. ಕ್ಷೇತ್ರ: ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳನ್ನೊಳಗೊಂಡು ಆಲಂಕಾರು ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 9812 ಮತದಾರರಿದ್ದಾರೆ.
ಕೌಕ್ರಾಡಿ ತಾ.ಪಂ. ಕ್ಷೇತ್ರ: ಕೌಕ್ರಾಡಿ ಹಾಗೂ ಇಚ್ಲಂಪಾಡಿ ಗ್ರಾಮಗಳನ್ನೊಳಗೊಂಡು ಕೌಕ್ರಾಡಿ ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ಕ್ಷೇತ್ರದಲ್ಲಿ 6979 ಮತದಾರರಿದ್ದಾರೆ.
ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರ: ಸುಬ್ರಹ್ಮಣ್ಯ, ಐನೆಕಿದು, ಏನೆಕಲ್ಲು ಗ್ರಾಮಗಳನ್ನೊಳಗೊಂಡು ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 8076 ಮತದಾರರಿದ್ದಾರೆ.
ಎಡಮಂಗಲ ತಾ.ಪಂ. ಕ್ಷೇತ್ರ: ಎಡಮಂಗಲ, ಎಣ್ಮೂರು, ಕೇನ್ಯ, ಬಳ್ಪ ಗ್ರಾಮಗಳನ್ನೊಳಗೊಂಡು ಎಡಮಂಗಲ ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 9535 ಮಂದಿ ಮತದಾರರಿದ್ದಾರೆ.

ಸವಣೂರು ತಾ.ಪಂ. ಕ್ಷೇತ್ರ: ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮಗಳನ್ನೊಳಗೊಂಡು ಸವಣೂರು ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 8379 ಮಂದಿ ಮತದಾರರಿದ್ದಾರೆ.
ಚಾರ್ವಾಕ ತಾ.ಪಂ. ಕ್ಷೇತ್ರ: ಚಾರ್ವಾಕ, ದೋಲ್ಪಾಡಿ, ಕಾಣಿಯೂರು ಗ್ರಾಮಗಳನ್ನೊಳಗೊಂಡು ಚಾರ್ವಾಕ ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದ್ದು, ಈ ಕ್ಷೇತ್ರದಲ್ಲಿ ಒಟ್ಟು 6389 ಮಂದಿ ಮತದಾರರಿದ್ದಾರೆ.
ಕುದ್ಮಾರು ತಾ.ಪಂ. ಕ್ಷೇತ್ರ: ಕುದ್ಮಾರು, ಕಾÊಮಣ, ಬೆಳಂದೂರು ಗ್ರಾಮಗಳನ್ನೊಳಗೊಂಡು ಕುದ್ಮಾರು ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 5640 ಮಂದಿ ಮತದಾರರಿದ್ದಾರೆ.
ಐತ್ತೂರು ತಾ.ಪಂ. ಕ್ಷೇತ್ರ: ಐತ್ತೂರು, ಬಿಳಿನೆಲೆ, ಕೊಂಬಾರು, ಸಿರಿಬಾಗಿಲು ಗ್ರಾಮಗಳನ್ನೊಳಗೊಂಡು ಐತ್ತೂರು ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 11299 ಮಂದಿ ಮತದಾರರಿದ್ದಾರೆ.
ನೂಜಿಬಾಳ್ತಿಲ ತಾ.ಪಂ. ಕ್ಷೇತ್ರ: ನೂಜಿಬಾಳ್ತಿಲ, ರೆಂಜಿಲಾಡಿ, ಕೊಣಾಜೆ, ಶಿರಾಡಿ ಗ್ರಾಮಗಳನ್ನೊಳಗೊಂಡು ನೂಜಿಬಾಳ್ತಿಲ ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 9681 ಮತದಾರರಿದ್ದಾರೆ.
ಕುಟ್ರುಪಾಡಿ ತಾ.ಪಂ. ಕ್ಷೇತ್ರ: ಕುಟ್ರುಪಾಡಿ, ಬಂಟ್ರ, 102 ನೆಕ್ಕಿಲಾಡಿ, ಬಲ್ಯ ಗ್ರಾಮಗಳನ್ನೊಳಗೊಂಡು ಕುಟ್ರುಪಾಡಿ ತಾ.ಪಂ. ಕ್ಷೇತ್ರವನ್ನಾಗಿ ಮಾಡಲಾಗಿದ್ದು ಒಟ್ಟು 10274 ಮಂದಿ ಮತದಾರರಿದ್ದಾರೆ.

LEAVE A REPLY

Please enter your comment!
Please enter your name here