ನೆಲ್ಯಾಡಿ: ಕೆಲ ದಿನದ ಹಿಂದೆ ಆನೆ ದಾಳಿಯಿಂದ ಹಾನಿಗೊಂಡ ಇಚ್ಲಂಪಾಡಿ ಗ್ರಾಮದ ಗುಂಡಿಕಂಡ, ಬಿಜೇರು, ನಡುಮನೆ ಕ್ರಾಸ್ ಪ್ರದೇಶಕ್ಕೆ ಕೆಪಿಸಿಸಿ ಸಂಯೋಜಕ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಕೃಷ್ಣಪ್ಪರವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗವೊಂದು ಆ.2ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಕಾಡಾನೆ ದಾಳಿಯಿಂದ ಆಗಿರುವ ನಷ್ಟದ ಕುರಿತಂತೆ ವಲಯಾರಣ್ಯಧಿಕಾರಿಯವರಿಂದ ಮಾಹಿತಿ ಪಡೆದುಕೊಂಡ ಜಿ.ಕೃಷ್ಣಪ್ಪ ಅವರು, ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕಡಬ ವಲಯ ಕಾಂಗ್ರೆಸ್ ವೀಕ್ಷಕ ರಾಯ್ ಅಬ್ರಹಾಂ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್, ಕೆಪಿಸಿಸಿ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್ ಬಾನಡ್ಕ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿವಾಕರ ಗೌಡ ಉದನೆ, ಕೌಕ್ರಾಡಿ ವಲಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಸದಸ್ಯ ಕೆ.ಪಿ.ತೋಮಸ್, ಕೌಕ್ರಾಡಿ ಗ್ರಾ.ಪಂ.ಸದಸ್ಯೆ ಡೈಸಿ ವರ್ಗಿಸ್, ರೋಯಿ ಟಿ.ಎಂ., ಮಾಜಿ ಸದಸ್ಯ ವರ್ಗೀಸ್ ಅಬ್ರಹಾಂ, ಶಿರಾಡಿ ಗ್ರಾ.ಪಂ.ಸದಸ್ಯ ಸಣ್ಣಿಜಾನ್ ಶಿರಾಡಿ, ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಕೆ.ಪಿ.ಅಬ್ರಹಾಂ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಸದಸ್ಯ ಅಝೀಝ್, ಕಡಬ ಬ್ಲಾಕ್ ಹಿಂದುಳಿದ ವಿಭಾಗದ ಮಾಜಿ ಅಧ್ಯಕ್ಷರಾದ ಗಿರೀಶ್ ಸಾಲಿಯಾನ ಬದನೆ, ಪೂವಪ್ಪ ಕರ್ಕೇರ, ಇಚಿಲಂಪಾಡಿ ಬೂತ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಗೌಡ ಅಲೆಕ್ಕಿ, ಜಾರ್ಜ್ ಕುಟ್ಟಿ ಉಪದೇಶಿ, ಚಾಕೋ ಇಂಜಿನಿಯರ್, ರೇಣು ಮಡಿಪು, ಕಾರ್ತಿಕ್ ಗುಂಡ್ಯ, ಸನ್ನಿ ಶಿರಾಡಿ, ಹೆಚ್.ಆದಂ ಆತೂರು, ಕರುಣಾಕರ ರಾಮಕುಂಜ, ಜಾನ್‌ಸನ್ ಮಾದೇರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇಚ್ಲಂಪಾಡಿ ಗ್ರಾಮಕ್ಕೆ ಸಂಬಂಧಿಸಿದ ಕೆಲವು ಬೇಡಿಕೆಗಳ ಬಗ್ಗೆ ಜಿ. ಕೃಷ್ಣಪ್ಪ ಅವರಿಗೆ ಗ್ರಾಮಸ್ಥರು ಮನವಿ ಮಾಡಿದರು.