ಎಸ್.ಪಿ.ವೈ.ಎಸ್. ಎಸ್.ಆಲಂಕಾರು ಭಾರತಿ ಶಾಖೆ ವತಿಯಿಂದ ಮಾತೃ ಧ್ಯಾನ,ಮಾತೃ ಪೂಜನಾ ಕಾರ್ಯಕ್ರಮ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

0

ಆಲಂಕಾರು: ಸಂಸ್ಕಾರ ,ಸಂಘಟನೆ ಸೇವೆ,ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ )ಕರ್ನಾಟಕ ನೇತ್ರಾವತಿ ವಲಯ , ದ.ಕ ಮಂಗಳೂರು ಮಹಾನಗರ
ಆಲಂಕಾರು ಭಾರತೀ ಶಾಖೆಯ ವತಿಯಿಂದ ಮಾತೃ ಪೂಜನ ಮತ್ತು ಮಾತೃಭೋಜನ ಕಾರ್ಯಕ್ರಮ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನಲ್ಲಿ ನಡೆಯಿತು. ಜು.30ರಂದು ಸಂಜೆ ಯೋಗ ಬಂಧುಗಳಿಂದ ಸಾಮೂಹಿಕ ಭಜನೆ, ನಗುವೆ ಯೋಗ ಕಾರ್ಯಕ್ರಮ, ಆಟೋಟಗಳನ್ನು ಜಿಲ್ಲಾ ಸಂಚಾಲಕ ಜಯರಾಮ ಹಾಗೂ ತಾಲೂಕು ಸಂಚಾಲಕ ಯೋಗೀಶ ನಡೆಸಿದರು. ಅನಂತರ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾಚಿಂತನ ಮತ್ತು ಪ್ರಶಿಕ್ಷಣದ ಪ್ರಮುಖ ಲೋಕೇಶ್ ರವರು ಮಾತನಾಡಿ ಜೀವನದಲ್ಲಿ ತಂದೆ, ತಾಯಿಯನ್ನು ಪೂಜಿಸದವನಿಗೆ ಎಂದೂ ಮುಕ್ತಿ ಸಿಗಲಾರದು ಎಂದು ತಿಳಿಸಿ ಮಾತೃ ಪೂಜಾನ,ಮಾತೃಧ್ಯಾನ, ಮಾತೃವಂದನಾ ಹಾಗು ಮಾತೃ ಭೋಜನ ಕಾರ್ಯಕ್ರಮದ ಮಹತ್ವ ತಿಳಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಅಡಳಿತ ಮಂಡಳಿಯು ವಿಶಾಲಕ್ಷಿ ನೈಯ್ಯಲ್ಗರವರು ಭಾಗವಹಿಸಿ ಶುಭಾಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಅನ್ ಲೈನ್ ಯೋಗ ಶಿಕ್ಷಕಿ ಲಲಿತಾರವರು ವಹಿಸಿದ್ದರು. ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ಕಾರ್ಯಕ್ರಮಕ್ಕೆ ಅಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಾಹಾರೈಸಿದರು. ಆಲಂಕಾರು ಶ್ರೀ ಭಾರತಿ ಯೋಗ ಶಾಖೆಯ ಯೋಗ ಬಂಧುಗಳಾದ ಪ್ರತಿಮಾರವರು
ಪ್ರಾರ್ಥಿಸಿ, ನಿಖಿತಾ ಸ್ವಾಗತಿಸಿ, ಅಮಿತಾ ಕಾರ್ಯಕ್ರಮ ನಿರೂಪಿಸಿ,ಶರ್ಮಿಳರವರು ವರದಿ ವಾಚಿಸಿ, ಮಲ್ಲಿಕಾರವರು ಧನ್ಯವಾದ ಸಮರ್ಪಿಸಿ, ಅಮಿತಾ ರಾವ್ ಅವರು ಲೋಕ ಕಲ್ಯಾಣ ಮಂತ್ರಪಟಿಸಿ, ಕೃತಿಕಾರವರು ಅನ್ನಪೂರ್ಣೇಶ್ವರಿ ಮಂತ್ರವನ್ನು ಪಟಿಸಿದರು. ಕಾರ್ಯಕ್ರಮದಲ್ಲಿ ಆಲಂಕಾರು ಶ್ರೀ ಭಾರತಿ ಶಾಖೆಯ ಯೋಗಬಂಧುಗಳು 48 ದಿವಸ ನಡೆದ ಯೋಗಾಭ್ಯಾಸ ದಿಂದಾದ ಪ್ರಯೋಜನವನ್ನು ತಿಳಿಸಿದರು.ನಂತರ ಶಿಬಿರಾರ್ಥಿಗಳಿಂದ ಮಾತೃವಂದನಾ ನಡೆದು ಮಾತೃಭೋಜನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಅಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಕುಮಾರ್ ಕುಡೂರು ,ಯೋಗ ಶಿಕ್ಷಕರಾದ ಅನಂದ ಕುಂಟಿಣಿ,ಪ್ರದೀಪ್ ಆಚಾರ್ಯ, ಸಂತೋಷ್ ಕುಮಾರ್,ಯಶೋದರ ಆಚಾರ್ಯ, ಕೃಷ್ಣಪ್ಪಣ್ಣ, ಡಾ.ಗೋವಿಂದ ಪ್ರಸಾದ್ ಕಜೆ, ರಾಜೇಶ್ ಶೆಟ್ಟಿ ಸಂಪ್ಯಾಡಿ,ಸದಾಶಿವ ಶೆಟ್ಟಿ ಮಾರಂಗ ಸೇರಿದಂತೆ ಆಲಂಕಾರು ಶ್ರೀ ಭಾರತಿ‌ ಶಾಖೆ,
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಶಾಖೆ ಮತ್ತು ಗಾಣಿಗ ಸಮುದಾಯ ಭವನ ಶಾಖೆಯ ಯೋಗಬಂಧುಗಳು, ಎಸ್.ಪಿ ವೈ.ಎಸ್.ಎಸ್ ನ ಜಿಲ್ಲಾ ಪ್ರಮುಖರು, ತಾಲೂಕು ಪ್ರಮುಖರು ಸಹಿತ ಹಲವು ಮಂದಿ ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here