ಪುತ್ತೂರು: ತಿಂಗಳ ನೀರಿನ ಬಿಲ್ ಪಾವತಿ ಮಾಡಿದ್ದರೂ ಬಿಲ್‌ನಲ್ಲಿ ಬಾಕಿ ಎಂದು ನಮೂದ್ ಮಾಡಲಾಗಿದ್ದು, ಕಟ್ಟಿದ ಬಿಲ್ ಪಾವತಿಯಲ್ಲಿ ದಾಖಲಾಗುವುದಿಲ್ಲವೇ ಅಥವಾ ನಗರಸಭಾ ಎಡವಟ್ಟಿನಿಂದ ಈ ರೀತಿಯಾಗಿದೆಯೇ ಎಂಬುದು ಗೊತ್ತಿಲ್ಲ.
ನಗರದ ಹೊರವಲಯದ ಪಡ್ಡಯೂರು ಎಂಬಲ್ಲಿ ಗೌರಿ ಎಂಬವರು ಮೇ ತಿಂಗಳ ನೀರಿನ ಬಿಲ್ 575 ಪಾವತಿ ಮಾಡಿದ್ದಾರೆ. ಇದಕ್ಕೆ ರಶೀದಿಯನ್ನೂ ನಗರಸಭೆಯಿಂದ ನೀಡಲಾಗಿದೆ. ಆದರೆ ಜೂನ್ ತಿಂಗಳ ಬಿಲ್‌ನಲ್ಲಿ ಹಳೆಯ ಬಾಕಿ ಎಂದು 575 ಸೇರಿಸಲಾಗಿದೆ. ಈ ಬಗ್ಗೆ ಮನೆ ಮಾಲಕರು ನಗರಸಭಾ ಅಧಿಕಾರಿಗಳಲ್ಲಿ ಕೇಳಿದರೆ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ ಎಂದು ಮನೆ ಮಾಲಿಕರು ಆರೋಪಿಸಿದ್ದಾರೆ. ನೀರಿನ್ ಬಿಲ್ ನಾವು ಪ್ರತೀ ತಿಂಗಳು ಪಾವತಿ ಮಾಡುತ್ತಿದ್ದೇವೆ. ಪಾವತಿ ಮಾಡಿದ ಬಳಿಕವೂ ನಂತರದ ಬಿಲ್‌ನಲ್ಲಿ ಹಳೆಯ ಬಾಕಿ ಎಂದು ನಮೂದಾಗುವುದಾದರೆ ನಾವು ಕಟ್ಟಿದ ಬಿಲ್ ಎಂಟ್ರಿ ಆಗುವುದಿಲ್ಲವೇ ಎಂದು ಮನೆ ಮಾಲಕ ಪ್ರಶ್ನಿಸಿದ್ದಾರೆ. ಯಾವ ಕಾರಣಕ್ಕೆ ಹೀಗಾಗಿದೆ ಎಂದು ನಗರಸಭೆಯ ಅಧಿಕಾರಿಗಳೇ ಉತ್ತರಿಸಬೇಕಿದೆ.