ಮಾಣಿ: ವಿದ್ಯಾನಗರ ಪಾಳ್ಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಗಳು ಚೆಸ್ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

0

ವಿಟ್ಲ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಂಟ್ವಾಳ ತಾಲೂಕು ಇದರ ವತಿಯಿಂದ ಅಳಿಕೆ ಸತ್ಯಸಾಯಿ ಲೋಕಸೇವಾ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮಾಣಿ ವಿದ್ಯಾನಗರ ಪಾಳ್ಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗಗಳಿಂದ ಭಾಗವಹಿಸಿದ ಆರು ವಿದ್ಯಾರ್ಥಿಗಳ ಪೈಕಿ ಪ್ರೌಢ ಶಾಲಾ ವಿಭಾಗದಲ್ಲಿ 10ನೇ ತರಗತಿಯ ಪ್ರೇಕ್ಷ ಪ್ರಥಮ ಸ್ಥಾನವನ್ನು ಹಾಗೂ ಅಶ್ವಿ ನ್ ಪಿ ಎಸ್ ರವರು ತೃತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹದಿನಾಲ್ಕು ವಯೋಮಾನದ ಹುಡುಗಿಯರ ವಿಭಾಗದ ಚೆಸ್ ಸ್ಪರ್ಧೆ ಯಲ್ಲಿ ಎಂಟನೇ ತರಗತಿಯ ಪ್ರಗತಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಜಿಲ್ಲಾಮಟ್ಟದ ಸ್ಪರ್ಧೆಯು ಬೆಳ್ಳಾರೆ ಕರ್ನಾ ಟಕ ಪಬ್ಲಿಕ್ ಸ್ಕೂ ಲ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here