ಪುತ್ತೂರು: ಪುತ್ತೂರು ಪೇಟೆಯ ಪ್ರಮುಖ ರಸ್ತೆಗಳಲ್ಲಿ ಅಂಗಡಿಯ ಮುಂಭಾಗ ಸರಕು ಸಾಗಾಣೆ ಸಮಯ ತುರ್ತಾಗಿ ವಾಹನ ನಿಲ್ಲಿಸುವಾಗ ಕೇಸು ಹಾಕದಂತೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಕಾ ಸಂಘದಿಂದ ಪುತ್ತೂರು ಸಂಚಾರ ಪೊಲೀಸ್ ಠಾಣೆ ಎಸ್.ಐ ಗೆ ಮನವಿ ನೀಡಿದರು.
ಪೇಟೆಯ ಪ್ರಮುಖ ರಸ್ತೆಗಳಲ್ಲಿ ಅಂಗಡಿಯ ಮುಂಭಾಗ ಸರಕು ಸಾಗಣೆ ಸಮಯದ ತುರ್ತಾಗಿ ವಾಹನ ನಿಲ್ಲಿಸಬೇಕಾಗುತ್ತದೆ. ಈ ಸಂದರ್ಭ ಅಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳು ವಾಹನಗಳಿಗೆ ಮತ್ತು ಚಾಲಕರಿಗೆ ಕೇಸು ಹಾಕುತ್ತಾರೆ. ತುರ್ತು ಸಂದರ್ಭ ಯಾವುದೆ ಕೇಸು ಹಾಕದಂತೆ ವರ್ತಕ ಸಂಘದ ಪೊಲೀಸರಿಗೆ ಮನವಿ ಮಾಡಿದೆ. ಈ ಸಂದರ್ಭ ವಾಣಿಜ್ಯ ಮತ್ತು ಕೈಗಾರಿಕಾ ಸಂಘಧ ಅಧ್ಯಕ್ಷ ಜಾನ್ ಕುಟ್ಹೀನಾ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ವಾಮನ್ ಪೈ, ಮನೋಜ್ ಟಿ.ವಿ ಉಪಸ್ಥಿತರಿದ್ದರು.
ಕೋರ್ಟು ರಸ್ತೆಗೆ ಸಂಚಾರ ಮುಕ್ತಕ್ಕೂ ಮನವಿ:
ಮುಖ್ಯರಸ್ತೆಯಿಂದ ಕೋರ್ಟ್ ರಸ್ತೆಗೆ ಹೋಗಲು ವ್ಯವಸ್ಥೆ ಕಲ್ಪಿಸುವುದರಿಂದ ಮುಖ್ಯ ರಸ್ತೆಯ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಕೋರ್ಟು ರಸ್ತೆಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ವರ್ತಕ ಸಂಘದ ಪದಾಧಿಕಾರಿಗಳು ಸಂಚಾರ ಪೊಲೀಸ್ ಠಾಣೆ ಎಸ್.ಐ ಜೊತೆ ಚರ್ಚಿಸಿದರು. ಈ ಕುರಿತು ನಗರಸಭೆ ಪೌರಾಯುಕ್ತರು, ಪೊಲೀಸ್ ಠಾಣಾಧಿಕಾರಿ, ಆರ್.ಟಿ.ಒ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸುವ ಕುರಿತು ಚಿಂತನೆ ನಡೆಸಲಾಯಿತು.