ಆ.10ಕ್ಕೆ ರೇಡಿಯೋ ಪಾಂಚಜನ್ಯ ಸ್ಟುಡಿಯೋದಲ್ಲಿ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆ

0

ಪುತ್ತೂರು: ದ.ಕ.ಜಿಲ್ಲೆ ಸಂಸ್ಕಾರ ಭಾರತೀ ಪುತ್ತೂರು ವಿಭಾಗ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯ, ರೋಟರಿ ಯುವ, ರೋಟರಿಕ್ಲಬ್ ಪುತ್ತೂರು ಸಿಟಿ, ಇನ್ನರ್ ವೀಲ್ ಕ್ಲಬ್, ಸಹಯೋಗದೊಂದಿಗೆ ಸ್ವಾತಂತ್ರö್ಯ ದಿನಾಚರಣೆಯ ಪ್ರಯುಕ್ತ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆಯು ಆ.10ರಂದು ನೆಹರುನಗರ ರೇಡಿಯೋ ಪಾಂಚಜನ್ಯ ಸ್ಟುಡಿಯೋದಲ್ಲಿ ನಡೆಯಲಿದೆ.

ಸ್ಪರ್ಧೆಯು ಗ್ರೂಪ್ ಮಾದರಿಯಲ್ಲಿ ನಡೆಯಲಿದ್ದು, 5 ರಿಂದ 7 ನೇ ತರಗತಿ ಹಾಗು 8 ರಿಂದ 10ನೇ ತರಗತಿ ವಿಭಾಗ ಮಾಡಲಾಗಿದ್ದು, ಬೆಳಿಗ್ಗೆ ಗಂಟೆ 9 ರಿಂದ ಸ್ಪರ್ಧೆಯು ಪ್ರಾರಂಭಗೊಳ್ಳಲಿದೆ. ಪ್ರತಿ ಶಾಲೆಯಿಂದ 2 ತಂಡಕ್ಕೆ ಅವಕಾಶ ನೀಡಲಾಗುವುದು, ತಂಡದಲ್ಲಿ 5 ರಿಂದ 7 ಜನ ಇರಬಹುದು. ಕರೋಕೆ ಬಳಕೆಗೆ ಅವಕಾಶವಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here