ಪುತ್ತೂರು: ಸ್ವಾತಂತ್ರೋತ್ಸವದ ಅಂಗವಾಗಿ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರಿನ ವತಿಯಿಂದ ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನ ಸಭಾಂಗಣದಲ್ಲಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಸ್ಫರ್ಧೆಗಳ ಬಳಿಕ ಅಂಬಿಕಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ಇಲ್ಲಿನ ರಸಾಯನ ಶಾಸ್ತ್ರ ಉಪನ್ಯಾಸಕಿ ವಿನುತ ಎಂ ಸಾಲೆ ಯವರು “ಅರಿವು” ಎಂಬ ಉಪನ್ಯಾಸ ನೆರವೇರಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ನೆರವೇರಿಸಲಾಯಿತು. ವೇದಿಕೆಯಲ್ಲಿ ನಾರಾಯಣ ಬನ್ನಿಂತಾಯ, ಸ್ವಪ್ನಾ ಎಸ್ ರಾವ್ ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷ ಪ್ರಶಾಂತ್ ಭಟ್, ರಿಕ್ರಿಯೇಷನ್ ಸೆಂಟರಿನ ಉಪಾಧ್ಯಕ್ಷ ವಿನುತ ವಿ. ಎಸ್ ,ರಿಕ್ರಿಯೇಷನ್ ಸೆಂಟರಿನ ಕಾರ್ಯದರ್ಶಿ ಸತೀಶ್ ಕುಮಾರ್ ಕೆ ಉಪಸ್ಥಿತರಿದ್ದರು.
ಪ್ರಶಾಂತ್ ಡಿ. ಎಸ್ ರವರು ವನ್ ಮಿಟಿನ್ ಗೇಮ್ ನೆರವೇರಿಸಿದರು. ಪವನ್ ಬಿ.ಎನ್ ಮತ್ತು ರಾಜೇಶ್ ಟಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿನುತ ವಿ ಎಸ್ ವಂದಿಸಿದರು.