ವಿವೇಕಾನಂದ ಶಿಶುಮಂದಿರದ ಕೃಷ್ಣಲೋಕದ ಬೆಳ್ಳಿ ಹಬ್ಬ ಸಂಭ್ರಮದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು:ವಿವೇಕಾನಂದ ಶಿಶುಮಂದಿರದ ವತಿಯಿಂದ ಸೆ.6ರಂದು ನಡೆಯಲಿರುವ ಶ್ರೀ ಕೃಷ್ಣಲೋಕ ಕಾರ್ಯಕ್ರಮದ ಬೆಳ್ಳಿ ಹಬ್ಬ ಸಂಭ್ರಮದ ಆಮಂತ್ರಣ ಪತ್ರವು ಆ.7ರಂದು ಬಿಡುಗಡೆಗೊಂಡಿತು.


ಬೆಳಿಗ್ಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ,‌ಪ್ರಾರ್ಥನೆ ಸಲ್ಲಿಸಲಾಯಿತು. ಸಂಜೆ ಶಿಶು ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಆಮಂತ್ರಣ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಕೃಷ್ಣನ ವೇಷ ಧರಿಸಿ ಭಾಗವಹಿಸಲು ಮಕ್ಕಳಿಗೆ ಸುವರ್ಣಾವಕಾಶ ನೀಡಲಾಗುತ್ತಿದ್ದು ಇದನ್ನು ಸದುಪಯೋಗ ಪಡಿಸಿಬೇಕು.‌ ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ಕೃಷ್ಣನ‌ ಸಂದೇಶಗಳನ್ನು ಪಾಲಿಸಲು ಪ್ರೇರಣೆಯಾಗಲಿದೆ. ಹಿಂದು ಧರ್ಮ,‌ಸಂಸ್ಕಾರ,‌ಆಚರಣೆ ಉಳಿಯಲು ಸಹಕಾರಿಯಾಗಲಿದೆ ಎಂದರು.


ಅಧ್ಯಕ್ಷ ದಾಮೋದರ ಪಾಟಾಳಿ ಮಾತನಾಡಿ, ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಶಿಶು ಮಂದಿರದ ಮಕ್ಕಳ ಅನ್ನದಾನಕ್ಕೆ ಐದು ಲಕ್ಷ ದತ್ತಿನಿಧಿ ಸ್ಥಾಪನೆ ಮಾಡಲಾಗುತ್ತಿದ್ದು ಇದಕ್ಕೆ ಸಹಕರಿಸುವಂತೆ ಮನವಿ ಮಾಡಿದರು.


ಗೌರವಾಧ್ಯಕ್ಷೆ ರಾಜಿ ಬಲರಾಮ ಆಚಾರ್ಯ, ಶಿಶು ಮಂದಿರದ ಅಧ್ಯಕ್ಷ ರಾಜ್ ಗೋಪಾಲ್ ಭಟ್, ಬೆಳ್ಳಿಹಬ್ಬ ಸಮಿತಿ ಖಜಾಂಚಿ ಈಶ್ವರ ಮುರಳಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಗರ ಸಭಾ ಸದಸ್ಯರಾದ ವಿದ್ಯಾಗೌರಿ, ಗೌರಿ ಬನ್ನೂರು, ಶಿಶುಮಂದಿರದ ಸಂಚಾಲಕ ಅಕ್ಷಯ ಕುಮಾರ್ ಬಿ.ಎಸ್., ಗೌರವ ಸಲಹೆಗಾರ ಉಪೇಂದ್ರ ಬಲ್ಯಾಯ, ಜನಾರ್ದನ ಬೆಟ್ಟ, ಪ್ರೊ.ವತ್ಸಲಾ ರಾಜ್ಞಿ, ಮಲ್ಲೇಶ್ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳ್ಳಿ ಹಬ್ಬ ಸಮಿತಿ ಕಾರ್ಯದರ್ಶಿ ಸಂತೋಷ್ ಕುಮಾರ್ ರೈ ಸ್ವಾಗತಿಸಿದರು. ಶಿಶುಮಂದಿರದ ಅಧ್ಯಕ್ಷ ರಾಜ್ ಗೋಪಾಲ್ ವಂದಿಸಿದರು

LEAVE A REPLY

Please enter your comment!
Please enter your name here