





ನೆಲ್ಯಾಡಿ: ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ (ರಿ.)ನೆಲ್ಯಾಡಿ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಆ.೬ರಂದು ನೆಲ್ಯಾಡಿಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು.


ಅತಿಥಿಯಾಗಿದ್ದ ಸಂಘದ ಗೌರವಾಧ್ಯಕ್ಷ, ನ್ಯಾಯವಾದಿಯೂ ಆಗಿರುವ ಎ.ದಿನಕರ ರೈಯವರು ರಿಕ್ಷಾ ಚಾಲಕರಿಗೆ ಕಾನೂನು ಸಲಹೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆಯವರು ಸಂಘವು 30ವರ್ಷಗಳಿಂದ ನಡೆದು ಬರುತ್ತಿದೆ. ರಿಕ್ಷಾ ಚಾಲಕರು ಸಂಘದ ನಿಯಮಗಳಿಗೆ ಬದ್ಧರಾಗಿ ಕೆಲಸ ನಿರ್ವಹಿಸಬೇಕು ಎಂದರು.






ಸಂಘದ ಕಾರ್ಯದರ್ಶಿ ನಝೀರ್ ಹೊಸಮಜಲು, ಜೊತೆಕಾರ್ಯದರ್ಶಿ ತೀರ್ಥೇಶ್ ಮಾದೇರಿ, ಉಪಾಧ್ಯಕ್ಷ ಟಿಪ್ಪುರಾಜ ನೆಲ್ಯಾಡಿ, ಕೋಶಾಧಿಕಾರಿ ಎನ್.ಕೆ.ಇಸ್ಮಾಯಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಲಹೆಗಾರ ಸಂತೋಷ್, ಮಾಜಿ ಅಧ್ಯಕ್ಷ ಮೋಹನ ದೋಂತಿಲ, ಮಾಜಿ ಕೋಶಾಧಿಕಾರಿ ದೇಜಪ್ಪ, ಮಾಜಿ ಲೆಕ್ಕಪರಿಶೋಧಕ ಪಿ.ಸಿ.ಅಬ್ರಹಾಂ, ಪ್ರಕಾಶ್, ಅಯ್ಯೂಬ್ ಕೆ.ಇ.ನೆಲ್ಯಾಡಿ ಸೇರಿದಂತೆ ರಿಕ್ಷಾ ಚಾಲಕರು ಉಪಸ್ಥಿತರಿದ್ದರು. ರವಿಪ್ರಸಾದ್ ಸ್ವಾಗತಿಸಿ, ನಝೀರ್ ವಂದಿಸಿದರು.










