ಗಾಳಿ,ಮಳೆ:1,733 ವಿದ್ಯುತ್ ಕಂಬ,13 ಟ್ರಾನ್ಸ್ಫಾರ್ಮರ್‌ಗಳಿಗೆ ಹಾನಿ

0

ಮೆಸ್ಕಾಂ ಪುತ್ತೂರು ವಿಭಾಗಕ್ಕೆ ಕೋಟಿ ನಷ್ಟ 1912

ಪುತ್ತೂರು:ಈ ಸಾಲಿನ ಮಳೆಗಾಲದಲ್ಲಿ ಗಾಳಿ,ಮಳೆಯಿಂದಾಗಿ ಮೆಸ್ಕಾಂ ಪುತ್ತೂರು ವಿಭಾಗದ ಪುತ್ತೂರು, ಸುಳ್ಯ ಹಾಗೂ ಕಡಬದಲ್ಲಿ ಒಟ್ಟು 1,733 ವಿದ್ಯುತ್ ಕಂಬಗಳು ಹಾಗೂ 13 ಟ್ರಾನ್ಸ್ಫಾರ್ಮರ್‌ಗಳಿಗೆ ಹಾನಿಯುಂಟಾಗಿದ್ದು ರೂ.2.32 ಕೋಟಿ ನಷ್ಟ ಸಂಭವಿಸಿರುವುದಾಗಿ ಮೆಸ್ಕಾಂ ಕಚೇರಿಯಿಂದ ಮಾಹಿತಿ ಲಭಿಸಿದೆ.


ಏ.1ರಿಂದ ಜು.31ರ ತನಕದ ಅವಧಿಯಲ್ಲಿ ಸಂಭವಿಸಿದ ಗಾಳಿ, ಮಳೆಯಿಂದಾಗಿ ಪುತ್ತೂರಿನಲ್ಲಿ 591 ಕಂಬ, 3 ಟ್ರಾನ್ಸ್ಫಾರ್ಮರ್, ಸುಳ್ಯದಲ್ಲಿ 657 ಕಂಬ, 5 ಟ್ರಾನ್ಸ್ಫಾರ್ಮರ್, ಕಡಬದಲ್ಲಿ 485 ಕಂಬ ಹಾಗೂ 5 ಟ್ರಾನ್ಸ್ಫಾರ್ಮರ್‌ಗಳಿಗೆ ಹಾನಿಯುಂಟಾಗಿದೆ.ಹಾನಿಯಿಂದಾಗಿ ಪುತ್ತೂರಿನಲ್ಲಿ ರೂ.77.33 ಲಕ್ಷ, ಸುಳ್ಯದಲ್ಲಿ ರೂ.88.35 ಲಕ್ಷ ಹಾಗೂ ಕಡಬದಲ್ಲಿ 67.05 ಲಕ್ಷ ನಷ್ಟ ಉಂಟಾಗಿದೆ.ಹಾನಿಗೊಂಡಿರುವ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ ಫಾರ್ಮರ್‌ಗಳನ್ನು ಸಕಾಲದಲ್ಲಿ ದುರಸ್ತಿಪಡಿಸಿ ಮರುಸ್ಥಾಪಿಸಲಾಗಿದೆ.


52 ಮಂದಿ ಮಾನ್ಸೂನ್ ಗ್ಯಾಂಗ್ ಮೆನ್‌ಗಳ ಕಾರ್ಯನಿರ್ವಹಣೆ:
ಮಳೆಗಾಲದಲ್ಲಿ ಸಂಭವಿಸುವ ಹಾನಿಗೆ ಸಂಬಂಧಿಸಿದಂತೆ ತುರ್ತು ಸೇವೆ ನೀಡಲು ಪುತ್ತೂರು ವಿಭಾಗದಲ್ಲಿ ಮೆಸ್ಕಾಂ ಸಿಬ್ಬಂದಿಗಳ ಜೊತೆಗೆ ಹೆಚ್ಚುವರಿಯಾಗಿ 52 ಮಂದಿ ಗ್ಯಾಂಗ್ ಮೆನ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.ಜೊತೆಗೆ 5 ವಾಹನಗಳು ಕಾರ್ಯನಿರ್ವಹಿಸಿದೆ.


247 ಸೇವೆ: ಮೆಸ್ಕಾಂನಲ್ಲಿ ಸಮಸ್ಯೆಗಳನ್ನು ತಿಳಿಸಲು 247 ಮಾದರಿಯಲ್ಲಿ ಕರೆ ಸ್ವೀಕರಿಸಲಾಗುತ್ತಿದ್ದು ಪುತ್ತೂರು ನಗರ ಉಪ ವಿಭಾಗದಲ್ಲಿ 18004251920, 9480833013, ಕಡಬ ವಿಭಾಗದಲ್ಲಿ 9480841369, ಸುಳ್ಯ ಉಪ ವಿಭಾಗದಲ್ಲಿ 9480833015, 08257-233299, ಸುಬ್ರಹ್ಮಣ್ಯ ಉಪ ವಿಭಾಗದಲ್ಲಿ 8277882868, 08257-281699 ನಂಬರ್ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಬಹುದು.


ವಿವಿಧ ಸೆಕ್ಷನ್ ಅಧಿಕಾರಿಗಳು:
ಮೆಸ್ಕಾಂ ಪುತ್ತೂರು ವಿಭಾಗದಲ್ಲಿ ವಿವಿಧ ಶಾಖೆಗಳನ್ನು ಹೊಂದಿದ್ದು ಮಳೆಗಾಲದಲ್ಲಿ ಯಾವುದೇ ಹಾನಿಗಳು ಸಂಭವಿಸಿದಾಗ ಶಾಖಾಧಿಕಾರಿಗಳನ್ನು ಸಂಪರ್ಕಿಸಬಹುದು.ಪುತ್ತೂರು ನಗರ ಉಪ ವಿಭಾಗದಲ್ಲಿ ಪುತ್ತೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ-9448289504, 08251-230393, ಶಾಖೆ-1ರಲ್ಲಿ ರಾಜೇಶ್ ಕೆ.-9448289638, 08251-236393, ಪುತ್ತೂರು ಶಾಖೆ-2ರಲ್ಲಿ ಕೆ.ಸುಂದರ-9448289644, 08251-231263, ಉಪ್ಪಿನಂಗಡಿ ಶಾಖೆ ನಿತಿನ್ ಕುಮಾರ್-94482899646, 08251-251401, ಪುತ್ತೂರು ಗ್ರಾಮಾಂತರ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಸಂತ ಕುಮಾರ್-9480833065, ಕುಂಬ್ರ ಶಾಖೆ ರವೀಂದ್ರ-9448289645, 08251-285683, ಬೆಟ್ಟಂಪಾಡಿ ಶಾಖೆ ಪುತ್ತು ಜೆ.-9448998737, 08251-288493, ಸವಣೂರು ಶಾಖೆ ನಾಗರಾಜ-ಕೆ.9448998736, 08251-282063, ಈಶ್ವರಮಂಗಲ ಶಾಖೆ ರಮೇಶ್-9480833074, 08251-289283, ಕಡಬ ಉಪ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿ ಕುಮಾರ್-9480833044, 08251-260159, ಕಡಬ ಶಾಖೆ ಸತ್ಯನಾರಾಯಣ ಸಿ.ಕೆ.-9448289647, 08251-260158, ಆಲಂಕಾರು ಶಾಖೆ ಪ್ರೇಮ್ ಕುಮಾರ್-9448998738, 08251-263600, ನೆಲ್ಯಾಡಿ ಶಾಖೆ ರಮೇಶ್ ಬಿ.-9448998725, 08251-254493, ಬಿಳಿನೆಲೆ ಶಾಖೆ ವಸಂತ ಕುಮಾರ್-9480841353, 08251-262353, ಸುಬ್ರಹ್ಮಣ್ಯ ಉಪ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಸಂತ ಕುಮಾರ್-9480841346, 08257-281699, ಸುಬ್ರಹ್ಮಣ್ಯ ಶಾಖೆಯಲ್ಲಿ ಚಿದಾನಂದ-9480841355, 08257-281355, ಪಂಜ ಶಾಖೆ ಮನಮೋಹನ-9480841351, 08257-278399, ಗುತ್ತಿಗಾರು ಶಾಖೆ ಲೋಕೇಶ್-9448289652, 08257-282199, ಸುಳ್ಯ ಉಪ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಕೆ. ನಾಕ್-9448289505, 08257-231399, ಸುಳ್ಯ ಶಾಖೆ ಸುಪ್ರೀತ್ ಎಸ್.ಕುಮಾರ್-9448283643, 08257-233299, ಬೆಳ್ಳಾರೆ ಶಾಖೆ ಕೆ.ವಿ ಪ್ರಸಾದ್-9448289653, 08257-272499, ಅರಂತೋಡು ಶಾಖೆ ಅಭಿಷೇಕ್-9448998740, 08257-265199, ಜಾಲ್ಸೂರು ಶಾಖೆ ಮಹೇಶ್(ಪ್ರಭಾರ)-9480841352, 08257-233399 ನಂಬರನ್ನು ಸಂಪರ್ಕಿಸಬಹುದು.

ಸಹಾಯವಾಣಿ
ಗ್ರಾಹಕರ ದೂರು ಹಾಗೂ ಪರಿಹಾರಕ್ಕಾಗಿ ಮೆಸ್ಕಾಂನಲ್ಲಿ 1912 ಸಹಾಯವಾಣಿಯು 24/7 ಉಚಿತ ಟೋಲ್ ಕಾರ್ಯನಿರ್ವಹಿಸುತ್ತಿದೆ.ಗ್ರಾಹಕರು ಸಹಾಯವಾಣಿಗೆ ಕರೆಮಾಡಿ ತಮ್ಮ ದೂರುಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಬಹುದು.24 ಗಂಟೆಯೂ ಕರೆ ಸ್ವೀಕರಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಮಳೆ, ಗಾಳಿಯಿಂದಾಗಿ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಹಾಗೂ ತಂತಿಗಳಿಗೆ ಹಾನಿಯುಂಟಾದ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಅದನ್ನು ಮುಟ್ಟುವುದು, ತೆರವುಗೊಳಿಸುವ ಕೆಲಸಗಳಿಗೆ ಹೋಗಬಾರದು.ಕೂಡಲೇ ವಿಭಾಗದ ಅಧಿಕಾರಿಗಳು, ಪವರ್ ಮೆನ್‌ಗಳಿಗೆ ಮಾಹಿತಿ ನೀಡಬೇಕು.ಜೊತೆಗೆ ಅಪಾಯ ಕಾರಿಯಾಗಿರುವ ಮರಗಳು, ಕೊಂಬೆಗಳ ಬಗ್ಗೆಯೂ ಮೆಸ್ಕಾಂ ಕಚೇರಿ, ಗ್ರಾಮ ಪಂಚಾಯತ್‌ಗೆ, ಮಾಹಿತಿ ನೀಡಿ ಸಹಕರಿಸಬೇಕು.ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಾಗ ವಿದ್ಯುತ್ ಲೈನ್‌ಗಳ ಬಗ್ಗೆ ಸುರಕ್ಷತೆ ಇರಲಿ.ಶಾಲಾ ಮಕ್ಕಳಲ್ಲಿಯೂ ಅರಿವು ಮೂಡಿಸಬೇಕು.
-ರಾಮಚಂದ್ರ, ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ಪುತ್ತೂರು ವಿಭಾಗ

LEAVE A REPLY

Please enter your comment!
Please enter your name here