ನೆ.ಮುಡ್ನೂರು, ಕೊಳ್ತಿಗೆ, ಮುಂಡೂರು ಗ್ರಾ.ಪಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ದಿನಾಂಕ ಬದಲಾವಣೆ

0

ಪುತ್ತೂರು:ಗ್ರಾಮ ಪಂಚಾಯತ್‌ನ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಈಗಾಗಲೇ ದಿನಾಂಕ ನಿಗದಿಪಡಿಸಲಾಗಿದ್ದು ಇದರಲ್ಲಿ ನೆಟ್ಟಣಿಗೆ ಮುಡ್ನೂರು, ಕೊಳ್ತಿಗೆ ಹಾಗೂ ಮುಂಡೂರು ಗ್ರಾ.ಪಂಗಳಲ್ಲಿ ದಿನಾಂಕ ಬದಲಾವಣೆಗೊಳಿಸಲಾಗಿದೆ.


ಆ.19ರಂದು ನಿಗದಿಪಡಿಸಲಾಗಿರುವ ನೆಟ್ಟಣಿಗೆ ಮುಡ್ನೂರು ಗ್ರಾ.ಪಂನ ಆಯ್ಕೆ ಪ್ರಕ್ರಿಯೆಗಳನ್ನು ಆ.21ರಂದು ನಡೆಸಲಾಗುವುದು.ಆ.18ರಂದು ಕೊಳ್ತಿಗೆಯಲ್ಲಿ ನಡೆಯಬೇಕಿದ್ದ ಆಯ್ಕೆ ಪ್ರಕ್ರಿಯೆಗಳು ಆ.19ರಂದು ನಡೆಯಲಿದೆ.ಆ.17ರಂದು ಮುಂಡೂರು ಗ್ರಾ.ಪಂನಲ್ಲಿ ನಡೆಯಬೇಕಿದ್ದ ಆಯ್ಕೆ ಪ್ರಕ್ರಿಯೆಗಳು ಆ.16ರಂದು ನಡೆಯಲಿದೆ.ನಿಡ್ಪಳ್ಳಿ ಗ್ರಾ.ಪಂನಲ್ಲಿ ಸಮಯ ಬದಲಾವಣೆಗೊಂಡಿದ್ದು ಅಪರಾಹ್ನ 2.30ರ ಬದಲು 2 ಗಂಟೆಗೆ ಆಯ್ಕೆ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿದೆ.ಉಳಿದಂತೆ ಎಲ್ಲಾ ಗ್ರಾ.ಪಂಗಳಲ್ಲಿಯೂ ಈ ಹಿಂದೆ ನಿಗದಿಪಡಿಸಿದ ದಿನಾಂಕ ಹಾಗೂ ಸಮಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ.

LEAVE A REPLY

Please enter your comment!
Please enter your name here