





ಗೌರವಾಧ್ಯಕ್ಷ: ಜಯಪ್ರಕಾಶ್ ಬದಿನಾರು, ಅಧ್ಯಕ್ಷ: ಸತೀಶ್ ಮಡಿವಾಳ


ಪುತ್ತೂರು: ಕೋಡಿಂಬಾಡಿಯ ಸೇಡಿಯಾಪು ಫ್ರೆಂಡ್ಸ್ ಕ್ಲಬ್‌ನ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷ ಹಾಗೂ ಗ್ರಾ.ಪಂ.ಸದಸ್ಯ ಜಯಪ್ರಕಾಶ್ ಬದಿನಾರುರವರ ಮಾರ್ಗದರ್ಶನದಲ್ಲಿ ಅಧ್ಯಕ್ಷ ಚಂದ್ರಶೇಖರ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಸಭೆಯಲ್ಲಿ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷರಾಗಿ ಇಂಟಕ್ ತಾಲೂಕು ಘಟಕದ ಅಧ್ಯಕ್ಷರೂ ಆಗಿರುವ ಜಯಪ್ರಕಾಶ್ ಬದಿನಾರು ಅವರನ್ನು ಪುನರಾಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಸತೀಶ್ ಮಡಿವಾಳ, ಕಾರ್ಯದರ್ಶಿಯಾಗಿ ಹರೀಶ್ ಸೇಡಿಯಾಪು, ಉಪಾಧ್ಯಕ್ಷರಾಗಿ ವಿನೋದ್ ಕುಲಾಲ್, ಜೊತೆ ಕಾರ್ಯದರ್ಶಿಯಾಗಿ ಹರಿಪ್ರಸಾದ್, ಸಂಚಾಕರಾಗಿ ಚಂದ್ರಶೇಖರ್ ಕುಲಾಲ್ ಅವರನ್ನು ಆಯ್ಕೆ ಮಾಡಲಾಯಿತು.














