ಪುತ್ತೂರು: ಕರಾಟೆ ಪ್ರಪಂಚದಾದ್ಯಂತ ಅಭ್ಯಾಸ ಮಾಡುವ ಅಗ್ರ ಸಮರ ಕಲೆಗಳಲ್ಲಿ ಒಂದಾಗಿದೆ.ಕರಾಟೆ ಕಲೆ ಆತ್ಮರಕ್ಷಣೆಗಿದ್ದು ಇದರ ತರಬೇತಿ ಪಡೆಯುವುದರಿಂದ ಆತ್ಮಬಲ ಮತ್ತು ಮಾನಸಿಕವಾಗಿ ಸದೃಢವಾಗಲು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಎಂದು ಜಪಾನ್ ಶೊಟೊಕಾನ್ ಕರಾಟೆ ಮತ್ತು ಮಾರ್ಷಲ್ ಆರ್ಟ್ ತರಬೇತಿ ಸಂಸ್ಥೆಯ ತರಬೇತುದಾರರಾದ ಶಿವಪ್ರಸಾದ್ ಡಿ. ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ಆರಂಭವಾದ ಕರಾಟೆ ಮತ್ತು ಮಾರ್ಷಲ್ ಆರ್ಟ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಾಟೆ ಸಮನ್ವಯವನ್ನು ಅಭಿವೃದ್ಧಿಪಡಿಸುತ್ತದೆ. ಮತ್ತು ಶಕ್ತಿ ನಮ್ಯತೆಯನ್ನು ಹೆಚ್ಚಿಸುತ್ತದೆ.ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಕರಾಟೆ ಕೌಶಲ ತರಬೇತಿ ಸ್ವಯಂ ರಕ್ಷಣೆಗೆ ಸಹಕಾರಿಯಾಗಲಿದೆ. ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಕು.ಸುಮಾ ಭಟ್ ಸ್ವಾಗತಿಸಿ, ವಂದಿಸಿದರು.