ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಹುಟ್ಟು ಹಬ್ಬ ಆಚರಣೆ – ಮಕ್ಕಳಿಗೆ ಮತ್ತು ಪೋಷಕರಿಗೆ ಧಾರ್ಮಿಕ ಶಿಕ್ಷಣದ ಮಾಹಿತಿ

0

ಪುತ್ತೂರು: ಶ್ರೀ ಗುರುದೇವಾನಂದ ಸೇವಾ ಬಳಗ ವಜ್ರಮಾತ ವಿಕಾಸ ಕೇಂದ್ರ ಗ್ರಾಮ ವಿಕಾಸ ಯೋಜನೆ ಪುತ್ತೂರು ಇದರ ವತಿಯಿಂದ ಅ.8ರಂದು ನವನೀತ ಸಭಾಂಗಣ ಬೊಳುವಾರು ಇಲ್ಲಿ ಅಟಲ್ ಉದ್ಯಾನ ಧಾರ್ಮಿಕ ಶಿಕ್ಷಣ ಕೇಂದ್ರ-3 ಇದರ ಸಹಯೋಗದೊಂದಿಗೆ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಕ್ಕಳಿಗೆ ಮತ್ತು ಪೋಷಕರಿಗೆ ಧಾರ್ಮಿಕ ಶಿಕ್ಷಣದ ಮಹತ್ವದ ಬಗ್ಗೆ ಮಾಹಿತಿಯನ್ನು ಪ್ರೊ.ವತ್ಸಲಾ ರಾಜ್ಞಿ ನೀಡಿದರು. ವೇದಿಕೆಯಲ್ಲಿ ಗುರುದೇವಾನಂದ ಸೇವಾ ಬಳಗದ ಅಧ್ಯಕ್ಷ ಸುದೀರ್ ನೊಂಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರಭಾವತಿ, ಶ್ರೀವಿದ್ಯಾ, ಗೌರವ ಸಲಹೆಗಾರ ಪ್ರೇಮಲತಾ ರಾವ್, ಗ್ರಾಮವಿಕಾಸ ಯೋಜನೆ ಮೇಲ್ವಿಚಾರಕಿ ಸವಿತಾ ರೈ, ಭವಾನಿ ಶಂಕರ್ ಶೆಟ್ಟಿ, ಶಾರದಾ ಕೇಶವ ಉಪಸ್ಥಿತರಿದ್ದರು. ಗುರುದೇವಾನಂದ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ, ಹರಿಣಾಕ್ಷಿ ಜೆ ಶೆಟ್ಟಿ ಸ್ವಾಗತಿಸಿ, ವಜ್ರಮಾತ ಅಧ್ಯಕ್ಷ ನಯನ ರೈ ವಂದಿಸಿದರು. ಮಕ್ಕಳು ಭಗವದ್ಗೀತೆ, ಶ್ಲೋಕ, ಭಜನೆ, ರಾಶಿ, ನಕ್ಷತ್ರಗಳ ಬಗ್ಗೆ ಬಾಯಿಪಾಠ ಹೇಳಿದರು. ಈ ಸಂದರ್ಭದಲ್ಲಿ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here