ನ್ಯಾಷನಲ್ ಸ್ಪ್ರಿಂಟ್ ಚಾಂಪಿಯನ್ ಶಿಪ್ ರ್‍ಯಾಲಿಯಲ್ಲಿ ಏಸ್ ಮೋಟಾರ್‍ಸ್ ಮ್ಹಾಲಕ ಆಕಾಶ್ ಐತ್ತಾಳ್ ರನ್ನರ್ ಅಪ್

0

ಪುತ್ತೂರು:ಚಂಡೀಗಢದಲ್ಲಿ ಆ.6 ರಂದು ನಡೆದ ಇಂಡಿಯನ್ ನ್ಯಾಷನಲ್ ಸ್ಫ್ರಿಂಟ್ ಚಾಂಪಿಯನ್ ಶಿಪ್ ಬೈಕ್ ರ್‍ಯಾಲಿಯಲ್ಲಿ ಬೊಳುವಾರು ಏಸ್ ಮೋಟಾರ್‍ಸ್ ಮ್ಹಾಲಕ ಆಕಾಶ್ ಐತ್ತಾಳ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.


ಸುಮಾರು 200 ಕಿಲೋಮೀಟರ್ ಡರ್ಟ್‌ನ್ನು ಒಳಗೊಂಡ ರ್‍ಯಾಲಿಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಸುಮಾರು ನೂರಾರು ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕೆಟಿಎಂ ವಿಭಾಗದಲ್ಲಿ ಆಕಾಶ್ ಐತಾಳ್ ತಂಡವನ್ನು ಪ್ರತಿನಿಧಿಸಿದ್ದರು. ರ್‍ಯಾಲಿಯ ಸಮಯದಲ್ಲಿ ಪ್ರತಿಸ್ಪರ್ಧಿಯೋರ್ವ ಬಿದ್ದವರನ್ನು ಉಪಚರಿಸಿ ನಂತರ ರ್‍ಯಾಲಿಯನ್ನು ಮುಂದುವರಿಸಿರುವುದರಿಂದಾಗಿ ಸಮಯ ಕಳೆದುಕೊಂಡು ರನ್ನರ್ ಅಪ್ ಆಗಿರುವುದಾಗಿ ಆಕಾಶ್ ಐತ್ತಾಳ್ ತಿಳಿಸಿದ್ದಾರೆ. ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿರುವ ನ್ಯಾಷನಲ್ ಚಾಂಪಿಯನ್ ಶಿಪ್‌ನಲ್ಲಿ ಇವರು ಭಾಗವಹಿಸಲಿದ್ದಾರೆ.

ಕೊಯಂತ್ತೂರಿನಲ್ಲಿ ಜು.16ರಂದು ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ಬೈಕ್ ರ್‍ಯಾಲಿಯ 2ನೇ ರನ್ನರ್ ಅಪ್, 2022ರ ನವಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ನ್ಯಾಶಷನಲ್ ಸ್ಪ್ರಿಂಟ್ ರ್‍ಯಾಲಿಯಲ್ಲಿ ಆರು ವಿಭಾಗದಲ್ಲಿ ಚಾಂಪಿಯನ್ ಶಿಪ್ ಹಾಗೂ ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆದ ರ್‍ಯಾಲಿಯಲ್ಲಿಯೂ ನ್ಯಾಷನಲ್ ಚಾಂಪಿಯನ್ ಆಗಿದ್ದರು. ಫೆಬ್ರವರಿಯಲ್ಲಿ ಬೆಂಗಳೂರು- ಚಿತ್ರದುರ್ಗಾದ ಮಧ್ಯೆಯ 1250 ಕಿ.ಮೀ ದೂರದ ದಕ್ಷಿಣ್ ಡೇರ್ ಚಾಂಪಿಯನ್ ಶಿಪ್ ಬೈಕ್ ರ್‍ಯಾಲಿಯಲ್ಲಿ 400ಸಿಸಿ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಅಲ್ಲದೆ ಚಂಡೀಗಡದಲ್ಲಿ ನಡೆದ ಸಜೋಬಾ ಚಾಂಪಿಯನ್ ಶಿಪ್ ಬೈಕ್ ರ್‍ಯಾಲಿಯಲ್ಲಿ ವಿದೇಶಿ ಬೈಕ್ ವಿಭಾಗದಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

LEAVE A REPLY

Please enter your comment!
Please enter your name here