ಅಧ್ಯಕ್ಷ: ಗೋಪಾಲ ವಳಾಲುದಡ್ಡು, ಕಾರ್ಯದರ್ಶಿ: ಧನಂಜಯ ಬಾರಿಕೆ, ಕೋಶಾಧಿಕಾರಿ: ಸೀತಾರಾಮ ಶೇಡಿ
ನೆಲ್ಯಾಡಿ: ಬಜತ್ತೂರು ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 2023-24ನೇ ಸಾಲಿನ ಅಧ್ಯಕ್ಷರಾಗಿ ಗೋಪಾಲ ವಳಾಲುದಡ್ಡು, ಪ್ರಧಾನ ಕಾರ್ಯದರ್ಶಿಯಾಗಿ ಧನಂಜಯ ಪಂಚಶ್ರೀ ಬಾರಿಕೆ ಹಾಗೂ ಕೋಶಾಧಿಕಾರಿಯಾಗಿ ಸೀತಾರಾಮ ಶೇಡಿ ಆಯ್ಕೆಗೊಂಡಿದ್ದಾರೆ.
ಜು.30ರಂದು ಮುದ್ಯ ಪಂಚಲಿಂಗೇಶ್ವರ ಸಭಾಂಗಣದಲ್ಲಿ ಅನಂತಕೃಷ್ಣ ಉಡುಪ ಮುದ್ಯ ಇವರ ನೇತೃತ್ವದಲ್ಲಿ ಕಳೆದ ಬಾರಿಯ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸೋಮಸುಂದರ ಕೊಡಿಪಾನರವರ ಅಧ್ಯಕ್ಷತೆಯಲ್ಲಿ ನಡೆದ ಗಣೇಶೋತ್ಸವ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಪೂವಪ್ಪ ಪೂಜಾರಿ ಕೊಡಿಪಾನ, ಉಪಾಧ್ಯಕ್ಷರಾಗಿ ಅಣ್ಣು ಬಿ.ಬೆದ್ರೋಡಿ, ಜೊತೆ ಕಾರ್ಯದರ್ಶಿಯಾಗಿ ಅವಿನಾಶ್ ಉಪತಿಪಾಲು, ಸಲಹೆಗಾರರಾಗಿ ಸೋಮಸುಂದರ್ ಕೊಡಿಪಾನ, ಸದಸ್ಯರಾಗಿ ಉಮೇಶ್ ಓಡ್ರಪಾಲು, ಸದಾನಂದ ಶಿಬಾರ್ಲ, ಗಣೇಶ್ ಕುಲಾಲ್ ಕೆದು, ಕೇಶವ ಗೌಡ ಗುಡ್ಡೆದಡ್ಕ, ಗಂಗಾಧರ ಪಂರ್ದಾಜೆ, ಪೂವಪ್ಪ ಮೇಸ್ತ್ರಿ ನಂಜಳಿ, ಮೋನಪ್ಪ ಗೌಡ ಪುಯಿಲ, ಶ್ರೀಧರ ಮಂಜಿಪಲ್ಲ, ಹರೀಶ್ ಲೈಟಿಂಗ್ ಉರಾಬೆ, ಸತೀಶ್ ನಾಯ್ಕ ಪಡ್ಪು, ರಾಜೇಶ್ ಆರಾಲುಕಟ್ಟ ಆಯ್ಕೆಗೊಂಡರು.
ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಪ್ರಸಾದ್ ಉಡುಪ, ಮಹೇಂದ್ರ ವರ್ಮ ಪಡ್ಪು, ಸಂತೋಷ್‌ಕುಮಾರ್ ಜೈನ್ ಬಾರಿಕೆ, ದಾಮೋದರ ಶೇಡಿಗುತ್ತು, ಗ್ರಾ.ಪಂ.ಸದಸ್ಯರಾದ ಮಾಧವ ಓರುಂಬೋಡಿ, ಉಮೇಶ್ ಓಡ್ರಪಾಲು, ಒಕ್ಕೂಟದ ಅಧ್ಯಕ್ಷ ನಾರಾಯಣ ಗಾಣದಮೂಲೆ, ಪಂಚಲಿಂಗೇಶ್ವರ ಭಜನಾ ಸಮಿತಿಯ ಅಧ್ಯಕ್ಷ ನಾರಾಯಣ ನೀರಕಟ್ಟೆ, ಗ್ರಾಮ ವಿಕಾಸ ಸಂಘದ ಅಧ್ಯಕ್ಷ ದಯಾನಂದ ಅರಾಲುತೋಟ, ಮುದ್ಯ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ಗೀತಾ ಮುದ್ಯ, ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಸದಾನಂದ ಶಿಬಾರ್ಲ, ಮನೋಜ್ ನೀರಕಟ್ಟೆ, ರುಕ್ಮಯ ಗೌಡ ಕಾಂಚನ, ವಾಸುದಡ್ಡು, ಮೋಹನ ದಡ್ಡು, ಸೇಸಪ್ಪ ಉಪಾತಿಪಾಲು, ತಿಮ್ಮಪ್ಪ ಉಪಾತಿಪಾಲು, ಅಶೋಕ್ ರೆಂಜಾಳ, ವಾಸುದೇವ ರೆಂಜಾಳ, ವಸಂತ ಕಾಂಚನ, ಜನಾರ್ದನ ಶೇಡಿ, ರಮೇಶ್ ಟಪಾಲುಕೊಟ್ಟಿಗೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಶಶಿಧರ ಮುದ್ಯ ಲೆಕ್ಕಪತ್ರ ಮಂಡಿಸಿದರು. ಗೋಪಾಲವಳಾಲುದದಡ್ಡು ಸ್ವಾಗತಿಸಿದರು. ಸೋಮಸುಂದರ ಕೊಡಿಪಾನರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿದರು.
‘ ಎಲ್ಲಾ ಪದಾಧಿಕಾರಿಗಳನ್ನು ಸಭೆಯಲ್ಲಿ ಸೇರಿದ ಗ್ರಾಮಸ್ಥರೇ ಆಯ್ಕೆ ಮಾಡಿದ್ದಾರೆ. ಆಯ್ಕೆಗೊಂಡ ಪದಾಧಿಕಾರಿಗಳು ತಮ್ಮ ಅವಧಿಯಲ್ಲಿ ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆಯಿಂದ ಧಾರ್ಮಿಕ ಸೇವೆಯನ್ನು ಮಾಡಬೇಕಾಗಿ ವಿನಂತಿ ‘.
ಗೋಪಾಲ ವಳಾಲುದಡ್ಡು
ಅಧ್ಯಕ್ಷರು, ಸಾರ್ವಜನಿಕ ಗಣೇಶೋತ್ಸವ ಸಮಿತಿ