ಪುತ್ತೂರು: ಪುತ್ರಿ ನಾಪತ್ತೆಯಾಗಿದ್ದಾಳೆಂದು ಇರ್ದೆ ನಿವಾಸಿ ಆಕೆಯ ತಾಯಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಇರ್ದೆ ಗ್ರಾಮದ ಸುಶೀಲಾ ಎಂಬವರ ಪುತ್ರಿ ಲಿಖಿತಾ(23ವ)ರವರು ನಾಪತ್ತೆಯಾದವರು.
ಸುಶೀಲಾ ಅವರು ಕೂಲಿ ಕೆಲಸ ಮಾಡುತ್ತಿದ್ದು, ಆ.9ರಂದು ಬೆಳಿಗ್ಗೆ ಕೂಲಿ ಕೆಲಸದ ನಿಮಿತ್ತ ತೆರಳಿದ್ದು, ಸಂಜೆ ಮನೆಗೆ ಹಿಂದಿರುವಾಗ ಮನೆಯಲ್ಲಿದ್ದ ಪುತ್ರಿ ಲಿಖಿತಾ ನಾಪತ್ತೆಯಾಗಿದ್ದರು. ಈ ಕುರಿತು ಸುಶೀಲಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.