ಉಪ್ಪಿನಂಗಡಿ: ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ

0

ಉಪ್ಪಿನಂಗಡಿ: ಇಲ್ಲಿನ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯನ್ನು ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿದೆ.


ಅಂಗನವಾಡಿ, ಯು.ಕೆ.ಜಿ., ಎಲ್.ಕೆ.ಜಿ. ವಿಭಾಗ, ಒಂದರಿಂದ ನಾಲ್ಕನೇ ತರಗತಿ ವರೆಗಿನ ವಿಭಾಗ, ಐದರಿಂದ ಏಳನೇ ತರಗತಿ ವಿಭಾಗ ( ಅವರ ಇಚ್ಛೆಯ ಶ್ರೀ ಕೃಷ್ಣ ಚಿತ್ರ ಬಿಡಿಸುವುದು), ಎಂಟರಿಂದ ಹತ್ತನೇ ತರಗತಿಯ ವಿಭಾಗದ (ಗೋವರ್ಧನ ಶ್ರೀ ಕೃಷ್ಣನ ಚಿತ್ರ ಬಿಡಿಸುವುದು), ಪಿಯುಸಿ ಯಿಂದ ಪದವಿ ವರೆಗಿನ ವಿಭಾಗ ( ಕಾಳಿಂಗ ಮರ್ಧನ ಶ್ರೀ ಕೃಷ್ಣನ ಚಿತ್ರ ಬಿಡಿಸುವುದು), ಸಾರ್ವಜನಿಕ ವಿಭಾಗ (ಶ್ರೀ ಕೃಷ್ಣ ನಿಂದ ಅರ್ಜುನನಿಗೆ ಗೀತೋಪದೇಶದ ಚಿತ್ರ ಬಿಡಿಸುವುದು).


ಸ್ಪರ್ಧೆಗೆ ಉಚಿತ ಪ್ರವೇಶಾವಕಾಶವಿದ್ದು, ಸ್ಪರ್ಧಾಸಕ್ತರು ಈ ಬಾರಿ ತಮ್ಮ ತಮ್ಮ ಶಾಲೆ ಅಥವಾ ಮನೆಗಳಲ್ಲಿಯೇ ಸ್ವರಚಿತ ಚಿತ್ರವನ್ನು ಬಿಡಿಸಿ ಅಂಚೆ ಮೂಲಕ ಅಥವಾ ಖುದ್ದಾಗಿ ಚಿತ್ರಗಳನ್ನು ತಲುಪಿಸಬಹುದಾಗಿದೆ. ಎ4 ಅಳತೆಯ ಬಿಳಿ ಹಾಳೆಯ ಒಂದು ಪುಟದಲ್ಲಿ ಸ್ಪರ್ಧಾ ವಿಷಯದ (ಶ್ರೀ ಕೃಷ್ಣ ನ ಚಿತ್ರವನ್ನು ಬಿಡಿಸುವುದು) ಬಗ್ಗೆ ಬರೆದು, ಇನ್ನೊಂದು ಪುಟದಲ್ಲಿ ಹೆಸರು, ತರಗತಿ, ಶಾಲೆಯ ಹೆಸರು, ತಂದೆಯ ಹೆಸರಿನೊಂದಿಗೆ ಮನೆಯ ವಿಳಾಸ, ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. 30 ರೊಳಗಾಗಿ ಚಿತ್ರಗಳನ್ನು ಅಧ್ಯಕ್ಷರು/ಕಾರ್ಯದರ್ಶಿ, ಶ್ರೀ ಮಾಧವ ಶಿಶು ಮಂದಿರ, ವೇದಶಂಕರ ನಗರ ಉಪ್ಪಿನಂಗಡಿ. ದ.ಕ 574241 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಸ್ಪರ್ಧೆಗೆ ಯಾವುದೇ ಪ್ರಾದೇಶಿಕ ಇತಿಮಿತಿ ಇಲ್ಲ. ಆಸಕ್ತರೆಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶವಿದ್ದು, ಬಹುಮಾನ ವಿಜೇತರಿಗೆ ಬಹುಮಾನ ವಿತರಣೆಯ ದಿನಾಂಕವನ್ನು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂ.:9741895998, 9448725998 ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here