ನೆಲ್ಯಾಡಿ : ಕಾಡಾನೆಯೊಂದು ಕೃಷಿ ತೋಟಕ್ಕೆ ದಾಳಿ ನಡೆಸಿ ಬಾಳೆ ಹಾಗೂ ಅಡಿಕೆ ಕೃಷಿ ಹಾನಿಗೊಳಿಸಿರುವ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ಆ.10ರಂದು ರಾತ್ರಿ ನಡೆದಿದೆ.
ಶಿವಾರುಮಲೆ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಕೊಣಾಲು ಗ್ರಾಮದ ಮಣ್ಣಮಜಲು ನಿವಾಸಿ ಎಂ.ಪಿ.ಜತ್ತಪ್ಪ ಗೌಡ ಎಂಬವರ ಕೃಷಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಯೊಂದು ಬಾಳೆ ಗಿಡ ಹಾಗೂ ಅಡಿಕೆ ಗಿಡ ಹಾನಿಗೊಳಿಸಿದೆ. ರಾತ್ರಿ ಸುಮಾರು 10.30ರ ವೇಳೆಗೆ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು ಅರಣ್ಯ ರಕ್ಷಕ ದೇವಿಪ್ರಸಾದ್ ಅವರು ಸ್ಥಳಕ್ಕೆ ಬಂದು ಗರ್ನಲ್ ಸಿಡಿಸಿ ಆನೆಯನ್ನು ಕಾಡಿಗೆ ಓಡಿಸಲು ಪ್ರಯತ್ನಿಸಿದರು. ರಾತ್ರಿ ಸುಮಾರು 12 ಗಂಟೆ ತನಕ ತೋಟದಲ್ಲಿದ್ದ ಆನೆ ಬಳಿಕ ಅರಣ್ಯ ಪ್ರದೇಶಕ್ಕೆ ಹೋಗಿದೆ. ಮೂರು ದಿನದ ಹಿಂದೆ ಶಿವಾರುಮಲೆ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಆಲಂತಾಯ, ಮಾಪಲದಲ್ಲೂ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿವೆ.