





ಕಾಣಿಯೂರು: ದಕ್ಷಿಣ ಕನ್ನಡ ತೋಟಗಾರಿಕೆ ಇಲಾಖೆ ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಮತ್ತು ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಆಶ್ರಯದಲ್ಲಿ ಅಡಿಕೆ ಕೃಷಿಯ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ಮತ್ತು ರೈತ ಉತ್ಪಾದಕ ಕಂಪನಿಯ ಶೇರು ಪತ್ರ ವಿತರಣೆ ಕಾರ್ಯಕ್ರಮವು ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಗಿರಿಶಂಕರ ಸುಲಾಯರವರು,ರೈತ ಉತ್ಪಾದಕ ಕಂಪನಿಯ ಬಗ್ಗೆ ಮಾಹಿತಿಯನ್ನು ನೀಡುತ್ತಾ, ರೈತರು ಒಟ್ಟಾಗಿ ಎಲ್ಲಾ ವಿಚಾರದಲ್ಲಿ ಒಗ್ಗಟ್ಟಾಗಬೇಕು. ಕೃಷಿಯನ್ನು ಅಭಿವೃದ್ಧಿ ಮಾಡಬೇಕು ಎಂದರು. ಕಾರ್ಯಕ್ರಮವನ್ನು ಅಡಿಕೆ ಮರ ಏರುವ ಯಂತ್ರ ತಯಾರಿಕರಾದ ಭಾಸ್ಕರ ಕಾಪಿನಕಾಡು ಚಾರ್ವಾಕ ಉದ್ಘಾಟಿಸಿ, ಶುಭ ಹಾರೈಸಿದರು.





ಕಾಣಿಯೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಗಣೇಶ್ ಉದನಡ್ಕ, ಇಕೋವ ಸಂಸ್ಥೆಯ ಸಂಯೋಜಕ ಸತೀಶ್ ನಾಯಕ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಪುತ್ತೂರು ಪಿ ಎಲ್. ಡಿ ಬ್ಯಾಂಕ್ ನ ನಿರ್ದೇಶಕ ದೇವಯ್ಯ ಖಂಡಿಗ, ಇ ಕೋವ ಸಂಸ್ಥೆಯ ಸಹಸಯೋಜಕ ಧರ್ಮೇಂದ್ರ ಗೌಡ ಕಟ್ಟತ್ತಾರು, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ಕಾರ್ಯದರ್ಶಿ ದಮಯಂತಿ ಮುದುವ ಉಪಸ್ಥಿತರಿದ್ದರು.
ವಿಟ್ಲ ಸಿಪಿ ಸಿ ಆರ್. ಐ ವಿಜ್ಞಾನಿ ಡಾ. ನಾಗರಾಜ್ ಏನ್. ಆರ್ ರೈತರಿಗೆ ಅಡಿಕೆ ಕೃಷಿಯ ಸಮಗ್ರ ನಿರ್ವಹಣೆ ಮಾಹಿತಿ ನೀಡಿದರು.
ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಸ್ವಾಗತಿಸಿ, ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಿಕೇಶ್ ಗೌಡ ಎಡಮಂಗಳ ವಂದಿಸಿದರು. ದಯಾನಂದ ಅಂಬುಲ ಕಾರ್ಯಕ್ರಮ ನಿರೂಪಿಸಿದರು. ಆಫೀಸ್ ಅಸಿಸ್ಟೆಂಟ್ ಆಗಿರುವ ಅಶೋಕ್ ಸಹಕರಿಸಿದರು.









