ಕಾಣಿಯೂರು: ಆಕ್ಟಿವಾ- ಲಾರಿ ಡಿಕ್ಕಿ: ಆಕ್ಟಿವಾ ಸವಾರನಿಗೆ ಗಾಯ

0

ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ

ಕಾಣಿಯೂರು: ಆಕ್ಟಿವೊಂದಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಲಾರಿ ಚಾಲಕ ಪರಾರಿಯಾಗಲು ಯತ್ನಿಸಿದ ಘಟನೆ ಕಾಣಿಯೂರಿನಲ್ಲಿ ಆ 11ರಂದು ನಡೆದಿದೆ. ಕಾಣಿಯೂರು ಸಮೀಪ ಕೂಡುರಸ್ತೆ ಎಂಬಲ್ಲಿ ಆಕ್ಟಿವಾ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿತ್ತು. ಘಟನೆಯಿಂದ ಆಕ್ಟಿವಾ ಸವಾರ ಗಾಯಗೊಂಡಿದ್ದಾರೆ.

ಗಾಯಳುವನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಾಯಿಸಯಿತು. ಈ ಸಂದರ್ಭದಲ್ಲಿ ಜೊತೆಗೆ ಇದ್ದ ಲಾರಿ ಚಾಲಕ ಈಗ ಬರುತ್ತೇನೆ ಎಂದು ಹೇಳಿ ಪರಾರಿಯಾಗಲು ಯತ್ನಿಸಿರುವುದನ್ನು ಗಮನಿಸಿದ ರಿಕ್ಷಾ ಚಾಲಕರು ಪರಾರಿಯಾದ ಲಾರಿ ಚಾಲಕನನ್ನು ಪಂಜ ಸಮೀಪ ಹಿಡಿದು, ಕಾಣಿಯೂರಿಗೆ ವಾಪಾಸ್ ಕರೆ ತಂದಿದ್ದಾರೆ ಎಂದು ವರದಿಯಾಗಿದೆ . ಗಾಯಗೊಂಡ ಆಕ್ಟಿವಾ ಸವಾರ ಶೀನಪ್ಪ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಯಿಸಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here