ಆ.13: ಪಾಲ್ತಾಡಿ ಮಾಡಾವು ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗದ್ದೆಯಲ್ಲಿ ಕೆಸರ್ ಡೊಂಜಿ ದಿನ

0

ಪುತ್ತೂರು: ಲೋಹಿತ್ ಬಂಗೇರ ಬಾಲಯ ನೇತೃತ್ವದಲ್ಲಿ ಬಾಲಯ ಕಂಬಳ ತಂಡ ತಿಂಗಳಾಡಿ, ಅಮರ ಸಂಘಟನಾ ಸಮಿತಿ ಸುಳ್ಯ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಹಾಗೂ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಪಾಲ್ತಾಡಿ ಇದರ ಸಹಕಾರದೊಂದಿಗೆ ಸಾರಕರೆ ದಿ.ಶೀನಪ್ಪ ಪೂಜಾರಿ ಬೊಳಿಯಾಲ ಅವರ 20 ನೇ ವರ್ಷದ ಸ್ಮರಣಾರ್ಥ ಅವರ ಮೊಮ್ಮಕ್ಕಳು ಸೇರಿಕೊಂಡು ಕೆಸರ್ ಡೊಂಜಿ ದಿನ, ಕಂಬಳ ಉತ್ಸವ ಮತ್ತು ರಕ್ತದಾನ ಶಿಬಿರ ಆ.13 ರಂದು ಮಾಡಾವು ಪಾಲ್ತಾಡಿಯ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗದ್ಧೆಯಲ್ಲಿ ಜರುಗಲಿದೆ ಎಂದು ಉಳ್ಲಾಕುಲು ಫ್ರೆಂಡ್ಸ್ ಕ್ಲಬ್ ನ ಹಿರಿಯ ಸದಸ್ಯ ದಾಮೋದರ್ ಪೂಜಾರಿ ಕೆಂಗುಡೆಲು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಕಾರ್ಯಕ್ರಮದಲ್ಲಿ ಬೆಳಿಗ್ಗೆ ದ.ಕ.ಜಿ.ಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಬೆಳಿಗ್ಗೆ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ.ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ವಿಶೇಷವಾಗಿ 10 ಮಂದಿ ಸಾಧಕರನ್ನು ಗೌರವಿಸಲಾಗುವುದು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿಂದೂ ಸಂಘಟನೆಗಳ ಮುಖಂಡ ಸತ್ಯಜಿತ್ ಸುರತ್ಕಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕಿ ರೇಖಾ, ಕಂಬಳ ಸಮಿತಿ ಮುಖ್ಯ ತೀರ್ಪುಗಾರರು ಮತ್ತು ಕಾಂತಾರ ಚಲನಚಿತ್ರ ನಟ ರಾಜೀವ ರೈ ಎಡ್ತೂರು, ಅರುಣ್ ಕುಮಾರ್ ಪುತ್ತಿಲ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ದೊಡ್ಡಮನೆ, ಕಬಳ ಮುಖ್ಯ ತೀರ್ಪುಗಾರ ವಿಜಯ ಕುಮರ್ ಕಂಗಿನಮನೆ, ಚಿನ್ನದ ಪದಕ ಪುರಸ್ಕೃತ ಪೊಲೀಸ್ ಪ್ರವೀಣ್ ರೈ, ಕಂಬಳ ತೀರ್ಪುಗಾರ ನಿರಂಜನ್ ರೈ ಮಠಂತಬೆಟ್ಟು ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಸಂಘಟನೆಯ ಅಧ್ಯಕ್ಷ ತಾರನಾಥ ಬೊಳಿಯುರು, ಕಾರ್ಯಕ್ರಮದ ಅಯೋಜಕರಾದ ರೋಶನ್ ಬಂಗೇರ ಮತ್ತು ರೋಹಿತ್ ಬಂಗೇರ ಹಾಗು ಕಂಬಳ ಸಮಿತಿ ತಂಡದ ಸದಸ್ಯ ರವೀಂದ್ರ ಪೂಜಾರಿ ಅವರು ಉಪಸ್ಥಿತರಿದ್ದರು.

ವಿಶೇಷ ಆಕರ್ಷಣೆಯಾಗಿ ಕಂಬಳ ಸ್ಪರ್ಧೆ:
ಕೆಸರು ಗದ್ದೆಯ ಒಂದು ಬದಿಯಲ್ಲಿ ಕಂಬಳದ ಕೋಣಗಳ ಓಟ ನಡೆಯಲಿದೆ. ಇದಕ್ಕಾಗಿ ಪ್ರತ್ಯೇಕ ಕರೆ ನಿರ್ಮಾಣ ಮಾಡಲಾಗಿದೆ. ಕಂಬಳದ ಸ್ಪರ್ಧಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಮತ್ತೊಂದು ಕೆಸರ್‌ಗದ್ದೆಯಲ್ಲಿ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ನಡೆಯಲಿದೆ ಎಂದು ಕಂಬಳ ತಂಡದ ಸದಸ್ಯ ರವೀಂದ್ರ ಪೂಜಾರಿ ತಿಳಿಸಿದರು.

LEAVE A REPLY

Please enter your comment!
Please enter your name here