ಅಧ್ಯಕ್ಷರಾಗಿ ಹೀರಾ ಖಾದರ್ ಹಾಜಿ ಪುನಾರಾಯ್ಕೆ
ಪುತ್ತೂರು :ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. 2023-24ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಹೀರಾ ಖಾದರ್ ಹಾಜಿ ಪುನಾರಾಯ್ಕೆಗೊಂಡರು.
ಕಾರ್ಯ ದರ್ಶಿಯಾಗಿ ಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ ಟಿ., ಉಪಾಧ್ಯಕ್ಷರುಗಳಾಗಿ ಪುರುಷರ ವಿಭಾಗದಿಂದ ನೆಲ್ಸನ್ ಡಿಸೋಜ, ರವಿಪ್ರಸಾದ್, ಮಹಮ್ಮದ್ ಒಮೇಗ, ಮಹಿಳಾ ವಿಭಾಗದಿಂದ ಉಪಾಧ್ಯಕ್ಷರುಗಳಾಗಿ ಪ್ರಮೀಳಾ, ಸಾಲಿಹತ್ತುನ್ನಿಸಾ, ಆಯಿಷತ್ ಶಮೀಮಾ, ಕೋಶಾಧಿಕಾರಿಯಾಗಿ ಮೊಯ್ದಿನ್ ಕೌಡಿಚ್ಚಾರ್, ಶಿಕ್ಷಕ ಪ್ರತಿನಿಧಿಯಾಗಿ ಶಿಕ್ಷಕಿ ರೇಖಾ ಆಯ್ಕೆಗೊಂಡರು. ಕಾರ್ಯಾಕಾರಿ ಸಮಿತಿ ಸದಸ್ಯರುಗಳಾಗಿ ಎ. ಕೃತಿಕಾ, ಸುಚಿತ್ರಾ, ಪ್ರಮೀಳಾ, ಖದೀಜಮ್ಮ ಡಿ., ಪುಷ್ಪ ಬಿ., ಉಮ್ಮರ್, ತೇಜಕುಮಾರ, ಅಬ್ದುಲ್ ಹಮೀದ್ ಎನ್., ಅಬ್ದುಲ್ ಕುಂಞ ಕೆ., ರವಿರಾಜ್ ಬೋರ್ಕರ್, ಬಿ.ಎಂ ಶಾಫಿ, ಜಾಫರ್ ಎಂ.ಕೆ ಆಯ್ಕೆಗೊಂಡರು. ಆಯ್ಕೆ ಪ್ರಕ್ರಿಯೆಯು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಗೂ ಸಂಸ್ಥೆಯ ನಿರ್ದೇಶಕ ಬದ್ರುದ್ದೀನ್ ಬಿ.ಎ ರವರ ಸಮ್ಮುಖದಲ್ಲಿ ನಡೆಯಿತು.
ಸ್ಮಾರ್ಟ್ ಕ್ಲಾಸ್ ರೂಂ ಉದ್ಘಾಟನೆ: ನೂತನವಾಗಿ ಸಂಸ್ಥೆಯಲ್ಲಿ ಆರಂಭಗೊಂಡ ಸ್ಮಾರ್ಟ್‌ಕ್ಲಾಸ್ ರೂಂನ್ನು ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹೀರಾ ಖಾದರ್ ಹಾಜಿ ಉದ್ಘಾಟಿಸಿ ಶುಭ ಹಾರೈಸಿದರು.ಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ ಟಿ ಸ್ವಾಗತಿಸಿ, ಶಿಕ್ಷಕ ಪ್ರದೀಪ್ ವಂದಿಸಿದರು. ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.