ಕುದ್ಮಾರು ನೂಜಿ ತವರು ಮನೆಯ ಡಾ.ಮೀರಾಮಣಿ ಅವರಿಗೆ “ಉತ್ತಮ ಗ್ರಂಥಪಾಲಕರು” ರಾಜ್ಯ ಪ್ರಶಸ್ತಿ ಪುರಸ್ಕಾರ

0

ಪುತ್ತೂರು: ಪುತ್ತೂರು ತಾಲೂಕು ಕುದ್ಮಾರು ಗ್ರಾಮದ ನೂಜಿ ತವರು ಮನೆಯ ಡಾ.ಮೀರಾಮಣಿಯವರು ಗ್ರಂಥಾಲಯ ಅಭಿವೃದ್ಧಿ ಹಾಗೂ ಗ್ರಂಥಾಲಯ ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರವು 2023ರ “ಉತ್ತಮ ಗ್ರಂಥಪಾಲಕರು” ಎಂಬ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಕುದ್ಮಾರು ದಿ. ನೂಜಿ ಲಿಂಗಪ್ಪ ಗೌಡ, ದುಗ್ಗಮ್ಮ ಇವರ ಪುತ್ರಿ ಹಾಗೂ ಸುಳ್ಯ ತಾಲೂಕು ಎಡಮಂಗಲ ಗ್ರಾಮದ ಪರ್ಲ ಆನಂದ್ ಪಿ.ಎಸ್. ಇವರ ಪತ್ನಿ ಆಗಿರುವ ಪ್ರಸ್ತುತ ಬೆಂಗಳೂರಿನ ಜೈನ್ ಯುನಿವರ್ಸಿಟಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ವೀರಾಮಣಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. .ಈ ಪ್ರಶಸ್ತಿಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಎಸ್. ಮಧು ಬಂಗಾರಪ್ಪರವರು ನಗರ ಕೇಂದ್ರ ಗ್ರಂಥಾಲಯ, ಹಂಪಿನಗರ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದ್ದ ಗ್ರಂಥ ಪಾಲಕರ ದಿನಾಚರಣೆಯ ಸಂದರ್ಭದಲ್ಲಿ ನೀಡಿ ಪುರಸ್ಕರಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್ ಹೊಸಮನಿ ಇವರು ಈ ಕಾರ್ಯವನ್ನು ಸಂಯೋಜಿಸಿದ್ದರು. ಡಾ.ಮೀರಾಮಣಿ ಇವರು ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು, ಸರಕಾರಿ ಪ್ರೌಢಶಾಲೆ ಎಡಮಂಗಲ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕಾಣಿಯೂರು ಇಲ್ಲಿಯ ಹಳೆವಿದ್ಯಾರ್ಥಿನಿ. ಪ್ರಸ್ತುತ ಬೆಂಗಳೂರಿನ ಜೈನ್ ಯುನಿವರ್ಸಿಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here