ಪುತ್ತೂರು: ಬಂದ್ ಹಾಗೂ ರಸ್ತೆ ತಡೆಗಳಿಂದ ವ್ಯಾಪಾರ, ವ್ಯವಹಾರ ಹಾಗೂ ನಾಗರಿಕರಿಗೆ ಹಲವಾರು ರೀತಿಯ ತೊಂದರೆಯಾಗುವುದರಿಂದ ಇದಕ್ಕೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಬೆಂಬಲ ಇರುವುದಿಲ್ಲ ಎಂದು ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಹಾಗೂ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈಯವರು ತಿಳಿಸಿದ್ದಾರೆ.
ಮುಂದೆ ಯಾವುದೇ ಧರ್ಮದ ಯುವತಿ ಹಾಗೂ ಯುವಕರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ ಕೊಲೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು ಈಗಾಗಲೇ ನಡೆದ ಘಟನೆಗಳನ್ನು ಖಂಡಿಸಲಾಗುವುದು. ವರ್ತಕರ ಪರವಾಗಿ ಸರಕಾರಕ್ಕೆ ಅಸಿಸ್ಟೆಂಟ್ ಕಮಿಷನರ್ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸೋಮವಾರ ಬೆಳಿಗ್ಗೆ ಪುತ್ತಿಲ ಪರಿವಾರ ಸೌಜನ್ಯಳ ಪರ ನ್ಯಾಯಕ್ಕಾಗಿ ಕರೆದಿರುವ ಪ್ರತಿಭಟನಾ ಸಭೆಯಲ್ಲಿ ಸ್ವಯಂ ಪ್ರೇರಿತ ಬಂದ್ ಮತ್ತು ರಸ್ತೆ ತಡೆ ವಿಚಾರದಲ್ಲಿ ಬಂದ್ ಮತ್ತು ರಸ್ತೆ ತಡೆಗೆ ಸಂಘದ ಬೆಂಬಲವಿಲ್ಲ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಹಾಗೂ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈಯವರು ತಿಳಿಸಿದ್ದಾರೆ.