ಕೋಚಕಟ್ಟೆ ಮದ್ರಸದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ

0

ಪೆರಾಬೆ: ಕೋಚಕಟ್ಟೆ ನೂರುಲ್ ಹುದಾ ಮದ್ರಸ ಅಂಗಣದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮವನ್ನು ಮದ್ರಸ ಅಧ್ಯಕ್ಷ ಜನಾಬ್ ಬಶೀರ್ ಕೆ.ಪಿ ನೆರವೇರಿಸಿದರು.ಮದ್ರಸದ ಅಧ್ಯಾಪಕ ಉಮ್ಮರುಲ್ ಫಾರೂಕ್ ದಾರಿಮಿ ದುಃಹ ನೆರವೇರಿಸಿ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮದ್ರಸ ಆಡಳಿತ ಸಮಿತಿ ಸದಸ್ಯರು,ಮದ್ರಸ ಸದಸ್ಯರು, ನೂರುಲ್ ಹುದಾ ಯಂಗ್ ಮೆನ್ಸ್ ಸದಸ್ಯರು, ಕೋಚಕಟ್ಟೆ ಫ್ರೆಂಡ್ಸ್ ಇದರ ಹಲವಾರು ಸದಸ್ಯರು ಮದ್ರಸ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಭಾಗವಹಿಸಿದರು.ಮದ್ರಸ ವಿದ್ಯಾರ್ಥಿಗಳು ರಾಷ್ಟ್ರ ಗೀತೆ ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು

LEAVE A REPLY

Please enter your comment!
Please enter your name here