ಉಪ್ಪಿನಂಗಡಿ: ಅಕ್ರಮ ಗಾಂಜಾ ಮಾರಾಟ-ಬಂಧನ

0

ಉಪ್ಪಿನಂಗಡಿ: ಇಲ್ಲಿನ ಕೂಟೇಲು ಎಂಬಲ್ಲಿ ಲಾರಿಯೊಂದರಲ್ಲಿ 2.1 ಕೆ ಜಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


ಆರೋಪಿ ರಾಘವೇಂದ್ರ ಅಮೀನ್ ಎಂಬಾತ ಮಾದಕವಸ್ತು ಗಾಂಜಾವನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಮೈಸೂರಿನ ಆಲಿ ಮೊಹಮ್ಮದ್ ಅಲಿಯಾಸ್ ಸಲೀಂ ಮೈಸೂರು ಎಂಬಾತನಿಂದ ತೆಗೆದುಕೊಂಡು ಮಂಗಳೂರು ಕಡೆಗೆ ತಾನು ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಕೂಟೇಲು ಎಂಬಲ್ಲಿ ಉಪ್ಪಿನಂಗಡಿ ಪೊಲೀಸರು ತಪಾಸಣೆಗೆ ಒಲಪಡಿಸಿ ಪತ್ತೆ ಹಚ್ಚಿದರು.
ಆರೋಪಿಯಿಂದ 40,೦೦೦/- ರೂಪಾಯಿ ಮೌಲ್ಯದ 2 ಕೆಜಿ 100 ಗ್ರಾಮ್ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here