ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಶೀಲಾ ಎಂಬವರ ಮನೆಗೆ ಕಳ್ಳರು ನುಗ್ಗಿ 2.5 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದ ಘಟನೆ ಸಂಭವಿಸಿದೆ.
ಶೀಲಾ ರವರು ತನ್ನ ಅನಾರೋಗ್ಯಪೀಡಿತ ಗಂಡನನ್ನು ಮಗಳ ಸಹಾಯದಿಂದ ಚಿಕಿತ್ಸೆ ನೀಡುವ ಬಗ್ಗೆ ಮನೆಗೆ ಬೀಗ ಹಾಕಿ ಆಸ್ಪತ್ರೆಗೆ ಹೋದವರು , ಮಧ್ಯಾಹ್ನ ಹಿಂತಿರುಗಿ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಮನೆಯೊಳಗಿದ್ದ ಗೋಡ್ರೇಜ್ ಕಪಾಟಿನ ಬಾಗಿಲು ತೆರೆಯಲ್ಪಟ್ಟು ಅದರಲ್ಲಿ ಎಂಟುವರೆ ಪವನ್ ತೂಕದ ಚಿನ್ನವನ್ನು ಯಾರೋ ಕಳ್ಳರು ಕದ್ದೊಯ್ಯಲಾಗಿತ್ತು. ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ಪೊಲೀಸ್ ಇಲಾಖೆಯು ಕಳವು ಗೀಡಾದ ಆಭರಣದ ಮೌಲ್ಯವನ್ನು 2.5 ಲಕ್ಷ ಎಂದು ಅಂದಾಜಿಸಲಾಗಿದೆಯಾದರೂ, ಪ್ರಸಕ್ತ ಮಾರುಕಟ್ಟೆಯ ದರವನ್ನು ಪರಿಗಣಿಸಿದರೆ 68 ಗ್ರಾಂ ತೂಕದ ಚಿನ್ನಾಭರಣಕ್ಕೆ ರೂಪಾಯಿ 3.5 ಲಕ್ಷಕ್ಕೂ ಮಿಕ್ಕಿದ ಮೌಲ್ಯ ತಗಲಲಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.